ಮಳೆಯಿಂದ ಮರ ಬಿದ್ದು ಸಂಚಾರ ಅಸ್ತವ್ಯಸ್ತ

15kls1 (1)
ಕಳಸದಲ್ಲಿ ಗಾಳಿ ಮಳೆಗೆ ಕಳಸ-ಬಾಳೆಹೊನ್ನೂರು ಮುಖ್ಯ ರಸ್ತೆಯ ಕೊಂಡದಮನೆ ಎಂಬಲ್ಲಿ ಮರ ಬಿದ್ದಿರುವುದು.
Published on

ಕಳಸ: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಭಾಗಗಳಲ್ಲಿ ಬುಧವಾರ ಗಾಳಿ ಜತೆಗೆ ಜೋರಾದ ಮಳೆ ಸುರಿದಿದೆ.
ಕಳೆದ ಕೆಲ ದಿನಗಳಿಂದ ಮಧ್ಯಾಹ್ನದ ನಂತರ ಸಾಧಾರಣವಾಗಿ ಸುರಿಯುತ್ತಿದ್ದ ಮಳೆ ಬುಧವಾರ ಸಂಜೆ ವೇಳೆಗೆ ಬಿರುಸಾದ ಗಾಳಿಯೊಂದಿಗೆ ಮಳೆ ಸುರಿದಿದೆ. ವಿಪರೀತ ಗಾಳಿಯಿಂದ ವ್ಯಾಪಕ ಮಳೆ ಸುರಿದಿದೆ. ಗಾಳಿ ಹೆಚ್ಚಾಗಿದ್ದರಿಂದ ಕಳಸ-ಬಾಳೆಹೊನ್ನೂರು ಮುಖ್ಯ ರಸ್ತೆಯ ಕೊಂಡದಮನೆ ಸಮೀಪ ಮರ ಬಿದ್ದು ಕೆಲ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು.
ಕಳಸ ಕೈಮರ ಸಮೀಪ ಮಹಮ್ಮದ್ ಇಬ್ರಾಹಿಂ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಮನೆ ಜಖಂಗೊಂಡಿದೆ. ಕಳಸ-ಕುದುರೆಮುಖ ಮುಖ್ಯ ರಸ್ತೆಯ ಬೈನೆಕಾಡು ಎಂಬಲ್ಲಿ ಮರಬಿದ್ದು ಕೆಲ ಕಾಲ ರಸ್ತೆ ಸಂಪರ್ಕ ಕಡಿತವಾಗಿತ್ತು. ವಿದ್ಯುತ್ ಕಂಬದ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೋಟೆಹೊಳೆ ಸಮೀಪ ಮರ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಕಲ್ಮಕ್ಕಿಯಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್ ಕಡಿತಗೊಂಡಿದೆ.
ಭಾರಿ ಮಳೆ ಹಿನ್ನಲೆಯಲ್ಲಿ ಕಳಸ ಮುಖ್ಯರಸ್ತೆಯ ತುಂಬಾ ನೀರು ಹರಿದು ಹೊಳೆ ನೆನಪಿಸುವಂತಾಯಿತು. ಮಳೆಯಿಂದ ಕೆಲ ಕಾಲ ವಾಹನ ಸಂಚಾರವಿಲ್ಲದೇ ಮುಖ್ಯರಸ್ತೆ ಬಿಕೋ ಎನ್ನುತ್ತಿದ್ದವು. ವಿದ್ಯುತ್ ಕಂಬಗಳು ಬಿದ್ದರಿರುವುದರಿಂದ ತಾಲೂಕಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net