ಮಳೆಗೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳು

rain, wind, road, trees,
Published on

ನ್ಯಾಮತಿ: ಗುರುವಾರ ಸುರಿದ ಮಳೆಗೆ ತಾಲೂಕಿನ ತಗ್ಗಿಹಳ್ಳಿ, ಆರುಂಡಿ ಗ್ರಾಮಗಳಲ್ಲಿ ತಲಾ ಒಂದು ಮನೆಗಳು ಭಾಗಶಃ ಹಾನಿಗೊಂಡಿವೆ.

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಳೆ ಶುಕ್ರವಾರವೂ ಮುಂದುವರಿದಿದ್ದು, ಕುಮಟಾ-ಕಾರಮಡಗಿ (ಹೊನ್ನಾಳಿ-ಸವಳಂಗ) ಗಡಿ ಚೌಡೇಶ್ವರಿ ದೇಗುಲದ ಬಳಿ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ.

ಪೊಲೀಸ್ ಇಲಾಖೆಯ ಮುಂಜು ಹೊನ್ನಾಳಿ, ಸಾಮಾಜಿಕ ಕಾರ್ಯಕರ್ತ ಯುನೂಸ್ ಬಾಷಾ ಮತ್ತು ಫಯಾಜ್ ಜೆಸಿಬಿ ಮೂಲಕ ತೆರವುಗೊಳಿಸುವ ಮೂಲಕ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟರು. ಸವಳಂಗ 35, ಬೆಳಗುತ್ತಿ 36.8, ಗೋವಿನಕೊವಿ 25.4 ಮಿ.ಮೀ. ಮಳೆಯಾಗಿದೆ.

ವಿದ್ಯುತ್ ಕಂಬಗಳು ಧರೆಗೆ: ನಿರಂತರ ಮಳೆ-ಗಾಳಿಗೆ ತಾಲೂಕಿನಾದ್ಯಂತ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ನ್ಯಾಮತಿ ಬೆಸ್ಕಾಂ ಘಟಕದ ಜೆಇ ಯೋಗೀಶ್ ತಿಳಿಸಿದ್ದಾರೆ.

ನ್ಯಾಮತಿ ಘಟಕದ ವ್ಯಾಪ್ತಿಯ ಕೊಡಿಕೊಪ್ಪ ಬಳಿ ಎಚ್‌ಟಿ ಪೊಲ್ 2, ಕಂಚಿಗಾರನಹಳ್ಳಿ 2, ಕೂಗೇನಹಳ್ಳಿ 4, ಸಾಲಬಾಳು ಹಳ್ಳದ ಬಳಿ ವಿದ್ಯುತ್ ಪರಿವರ್ತಕ ಬಿದ್ದಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸರಿಪಡಿಸಿರುವುದಾಗಿ ತಿಳಿಸಿದರು.

ಎನ್‌ಎಂಟಿ ಬೆಸ್ಕಾಂ ಜು. 19
ನ್ಯಾಮತಿ, ವಿದ್ಯುತ್, ಕಂಬ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net