

ಮಂಗಳೂರು: ಕಳೆದ ಎರಡು ದಿನಗಳಿಂದ ಬೀಸುತ್ತಿರುವ ಬಿರುಸಿನ ಗಾಳಿಮಳೆಯಿಂದ ನಗರದ ಕೊಟ್ಟಾರ ಕ್ರಾಸ್ ಮತ್ತು ಇನ್ಫೋಸಿಸ್ ಕಟ್ಟಡದ ಸಮೀಪ ಮರಗಳು, ವಿದ್ಯುತ್ ತಂತಿ ಕಂಬ ನೆಲಕ್ಕುರುಳಿವೆ.
ಇದು ದಿನಂಪ್ರತಿ ಜನರು ಓಡಾಡುವ ರಸ್ತೆಯಾಗಿದ್ದು, ಘಟನೆ ರಾತ್ರಿ ಜನಸಂಚಾರ ಇಲ್ಲದ ಸಂದರ್ಭದಲ್ಲಿ ನಡೆದ ಕಾರಣ ಯಾವುದೇ ತೊಂದರೆಯಾಗಿಲ್ಲ.
ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ- ನೇರಳಕಟ್ಟೆ ಎಂಬಲ್ಲಿ ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಸಿಬ್ಬಂದಿ ತೆರವುಗೊಳಿಸಿದರು.
ಸುಳ್ಯ- ಸುಬ್ರಹ್ಮಣ್ಯ ರಸ್ತೆ ಮಧ್ಯದಲ್ಲಿರುವ ಕಂದಡ್ಕ ಸೇತುವೆ ಕೆಳ ಭಾಗದ ಹೊಳೆಯಲ್ಲಿ ಮರದ ದಿಮ್ಮಿಗಳು ಸೇತುವೆಗೆ ಅಡ್ಡವಾಗಿ ನಿಂತಿದ್ದವು. ಅರಣ್ಯ ಇಲಾಖೆ ಹಾಗೂ ಸುಳ್ಯ ಪಟ್ಟಣ ಪಂಚಾಯತಿ ಅಧಿಕಾರಿಗಳು ತೆರವುಗೊಳಿಸಿದರು.
ತಹಶೀಲ್ದಾರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.