ವೃಕ್ಷ ಉದ್ಯಾನ, ಯಾತ್ರಿ ನಿವಾಸ ನಿರ್ಮಾಣಕ್ಕೆ ಅಸ್ತು

29-msk-1
ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಉದ್ಯಾನ ನಿರ್ಮಾಣಕ್ಕೆ ಅರಣ್ಯ ಇಲಾಖೆ ಆರ್‌ಎಫ್‌ಒ ಸುಭಾಶ್ಚಂದ್ರ, ಕಂದಾಯ ಅಧಿಕಾರಿ ಮಹಾಂತೇಶ, ಗ್ರಾಮ ಲೆಕ್ಕಾಧಿಕಾರಿ ಗಂಗಪ್ಪ, ಶರಣಗೌಡ ಸ್ಥಳ ಪರಿಶೀಲನೆ ಮಾಡಿದರು.
Published on

ಮಸ್ಕಿ: ಪಟ್ಟಣದಲ್ಲಿ ವೃಕ್ಷ ಉದ್ಯಾನ, ಸರ್ಕಿಟ್ ಹೌಸ್ ಮತ್ತು ಯಾತ್ರಿ ನಿವಾಸ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದ್ದು, ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳ ತಂಡ ಗುರುವಾರ ಸ್ಥಳ ಪರಿಶೀಲನೆ ನಡೆಸಿತು.

ಹತ್ತು ಎಕರೆಯಲ್ಲಿ ವೃಕ್ಷ ಉದ್ಯಾನ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು, ಜಾಗ ಒದಗಿಸುವಂತೆ ತಹಸೀಲ್ದಾರ್‌ಗೆ ಪತ್ರ ಬರೆದಿದ್ದಾರೆ. ಅದರಂತೆ ಲೋಕೋಪಯೋಗಿ ಇಲಾಖೆಯಿಂದ ತಲಾ ಒಂದು ಎಕರೆಯಲ್ಲಿ ಸರ್ಕಿಟ್ ಹೌಸ್ ಮತ್ತು ಯಾತ್ರಿ ನಿವಾಸ ನಿರ್ಮಾಣ ಮಾಡಲು ನಿವೇಶನ ನೀಡುವಂತೆ ಮನವಿ ಮಾಡಿದ್ದಾರೆ. ಕಂದಾಯ ಅಧಿಕಾರಿಗಳು ಜಾಗವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿದರೆ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ಕರೆಯಲು ಸಿದ್ಧತೆ ನಡೆಸಿದ್ದಾರೆ.

ಸರ್ಕಾರ ಉದ್ಯಾನ ನಿರ್ಮಾಣಕ್ಕೆ ಮೂರು ಕೋಟಿ ರೂ. ಬಿಡುಗಡೆ ಮಾಡಿದೆ. ಉದ್ಯಾನದಲ್ಲಿ ಮಕ್ಕಳಿಗೆ ಆಟವಾಡಲು ಆಟಿಕೆ ಸಾಮಗ್ರಿ, ಫುಟ್‌ಪಾತ್, ರೋಪ್‌ವೇ, ಕಾರಂಜಿ ನಿರ್ಮಾಣ ಮಾಡಲಾಗುತ್ತದೆ ಎಂದು ಆರ್‌ಎಫ್‌ಒ ಸುಭಾಶ್ಚಂದ್ರ ತಿಳಿಸಿದರು. ಕಂದಾಯ ಅಧಿಕಾರಿ ಮಹಾಂತೇಶ, ಗ್ರಾಮ ಲೆಕ್ಕಾಧಿಕಾರಿ ಗಂಗಪ್ಪ ವಲಯ ಅರಣ್ಯಾಧಿಕಾರಿ ಹುಚ್ಚಪ್ಪ, ಶಾಸಕರ ಆಪ್ತ ಕಾರ್ಯದರ್ಶಿ ಶರಣಗೌಡ ಇದ್ದರು.

ವೃಕ್ಷ ಉದ್ಯಾನ, ಬೆಟ್ಟದ ಮಲ್ಲಿಕಾರ್ಜುನ ಗುಡಿಗೆ ಹೋಗುವ ಮಾರ್ಗದ ಒಂದು ಎಕರೆ ಸ್ಥಳದಲ್ಲಿ ಸರ್ಕಿಟ್ ಹೌಸ್ ಮತ್ತು ಇನ್ನೊಂದು ಎಕರೆಯಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ಥಳ ಪರಿಶೀಲನೆ ಮಾಡಿ ಒಪ್ಪಿತವಾದರೆ ತ್ವರಿತ ಕಾಮಗಾರಿ ಆರಂಭಿಸಲಾಗುವುದು. ಆರ್.ಬಸನಗೌಡ ತುರ್ವಿಹಾಳ ಶಾಸಕ, ಮಸ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net