ಸಿರಿಗೆರೆ ವನ್ಯಜೀವಿ ವಲಯದಲ್ಲಿ ಮರಗಳ ಕಡಿತಲೆ !

Sirigere Wildlife Sanctuary
ಶಿವಮೊಗ್ಗ ಸಿರಿಗೆರೆ ವನ್ಯಜೀವಿ ವಿಭಾಗದಲ್ಲಿ ಸಾಗುವಾನಿ ಮರಗಳ ಕಡಿತಲೆ ಮಾಡಿರುವುದು.
Published on

ಶಿವಮೊಗ್ಗ: ಸಿರಿಗೆರೆ ವನ್ಯಜೀವಿ ವಲಯದಲ್ಲಿ ಲಕ್ಷಾಂತರ ರೂ. ಮೌಲ್ಯದ ಸಾಗುವಾನಿ ಸೇರಿ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಲಾಗಿದೆ.

ಸಿರಿಗೆರೆ ವನ್ಯಜೀವಿ ವಲಯದ ಮಲೇಶಂಕರ ಮತ್ತು ಕೂಡಿಗೆ ಭಾಗದ ಅರಣ್ಯದಲ್ಲಿ ಸಾಗುವಾನಿ ಮರಗಳ ಕಡಿತಲೆ ಮಾಡಲಾಗಿದೆ. ಕಡಿತಲೆಯಾದ ಮರಗಳ ಮೇಲೆ ಹಾಕಿರುವ ಚಾಪಾ (ಹ್ಯಾಮರ್ ಕ್ಯೂ) ಹಾಗೂ ಇಲಾಖೆಯಲ್ಲಿ ದಾಖಲೆಗೂ ವ್ಯತ್ಯಾಸ ಕಂಡುಬಂದಿದೆ. ಹತ್ತಾರು ಮರಗಳ ಕಡಿತಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಳ್ಳ ಸಾಗಣೆ ಮಾಡಿರುವ ಬಗ್ಗೆ ಸೂಕ್ತ ತನಿಖೆ ಮಾಡಬೇಕೆಂದು ಪರಿಸರಾಸಕ್ತರು ಆಗ್ರಹಿಸಿದ್ದಾರೆ.

ಮರಗಳ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿ ಸಿರಿಗೆರೆ ವನ್ಯಜೀವಿ ವಲಯದಲ್ಲಿ ದಾಖಲಾಗಿರುವ ಪ್ರಕರಣದಲ್ಲೂ ವ್ಯತ್ಯಾಸ ಆಗಿದೆ. ಮೂರ್ನಾಲ್ಕು ತಿಂಗಳಿಂದ ಈಚೆಗೆ ಎಗ್ಗಿಲ್ಲದೆ ಮರಗಳ ಕಳ್ಳಸಾಗಣೆ ಆಗಿರುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಮಲೇಶಂಕರ ದೇವಸ್ಥಾನಕ್ಕೆ ಹೋಗುವ ಮಾರ್ಗ ಹಾಗೂ ಕೂಡಿಗೆ ತೆರಳುವ ಅರಣ್ಯದಲ್ಲಿ ಮರಗಳ ಕಡಿತಲೆ ಆಗಿರುವುದನ್ನು ದೃಢಪಟ್ಟಿದೆ. ಅದರಲ್ಲೂ ಕೂಡಿ ಸೆಕ್ಷನ್ ಸರ್ವೇ ನಂ. 34, 31 ಅರಣ್ಯ ಪ್ರದೇಶದಿಂದ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಕಳ್ಳಸಾಗಣೆ ನಡೆದಿದೆ. ಮತ್ತು ಈ ಭಾಗದಲ್ಲಿ ಚೆಕ್‌ಪೋಸ್ಟ್ ಇಲ್ಲದಿರುವುದರಿಂದ ಮರಗಳು ಕಳ್ಳರ ಪಾಲಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net