ಹೆದ್ದಾರಿ ಮೇಲೆ ಉರುಳಿದ ಮರ

25mnd5
Published on

ಮುಂಡಗೋಡ: ತಾಲೂಕಿನ ಗೋಟಗೋಡಿಕೊಪ್ಪ ಗ್ರಾಮದ ಸನಿಹ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮ ಒಂದು ತಾಸಿಗೂ ಅಧಿಕ ಸಮಯ ಹೆದ್ದಾರಿ ಸಂಚಾರಕ್ಕೆ ಅಡಚಣೆಯುಂಟಾದ ಘಟನೆ ಮಂಗಳವಾರ ಸಂಜೆ ಜರುಗಿತು.
ಮಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಟಗೋಡಿ ಕೊಪ್ಪ ಗ್ರಾಮದ ಸನಿಹ ಬುಡಸಮೇತ ಉರುಳಿದ ಮರ ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ಒಂದು ವಿದ್ಯುತ್ ಕಂಬ ಹಾಗೂ ತಂತಿ ಹರಿದು ನೆಲಕಚ್ಚಿವೆ. ಮರ ಬಿದ್ದು 40 ನಿಮಿಷದ ಬಳಿಕ ಹೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದರು. ಹೀಹಾಗಿ, ನೂರಾರು ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿ ಪ್ರಯಾಣಿಕರು ಪರದಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net