ಬೈಕ್ ಮೇಲೆ ಬಿದ್ದ ರೆಂಬೆ

mara
Published on

ಕಿನ್ನಿಗೋಳಿ: ಆಲದ ಮರದ ರೆಂಬೆ ಬೈಕ್ ಮೇಲೆ ಬಿದ್ದ ಘಟನೆ ಕಿನ್ನಿಗೋಳಿ ಮುಖ್ಯ ರಸ್ತೆಯ ರಾಜಾಂಗಣ ಬಳಿ ನಡೆದಿದೆ.

ಮುಖ್ಯ ರಸ್ತೆಯ ರಾಜಾಂಗಣ ಬಳಿಯ ಆಲದ ಮರದ ಕೆಳಗೆ ಸುಧಾಕರ ಆಚಾರ್ಯ ಎಂಬುವರ ಕಮ್ಮಾರ ಕೆಲಸದ ಕೋಣೆ ಇದ್ದು, ಬುಧವಾರ ಬೆಳಗ್ಗೆ ಅವರು ಬೈಕ್ ನಿಲ್ಲಿಸಿ ಒಳ ಹೋಗುವ ಸಂದರ್ಭಮರದ ರೆಂಬೆ ಬೈಕ್ ಮೇಲೆ ಮುರಿದು ಬಿದ್ದಿದೆ.

ಸ್ಥಳಕ್ಕೆ ಕೆಮ್ರಾಲ್ ಪಂಚಾಯಿತಿ ಅಧ್ಯಕ್ಷ ಮೈಯದಿ, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಕಾರ್ಯದರ್ಶಿ ಕೇಶವ ದೇವಾಡಿಗ, ಪಂಚಾಯಿತಿ ಸದಸ್ಯರು ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net