ಶಾಲೆ ತರಗತಿ ಕೊಠಡಿ ಮೇಲೆ ಬಿದ್ದ ಮರ

Sid_Tree falls on school
Published on

ಬೆಳ್ವೆ: ಹೆಬ್ರಿ ತಾಲೂಕಿನ ಅಲ್ಬಾಡಿ ಮೂರುಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತರಗತಿ ಕೊಠಡಿ ಮೇಲೆ ಶುಕ್ರವಾರ ಮರ ತುಂಡಾಗಿ ಬಿದ್ದ ಪರಿಣಾಮ ಶಾಲೆ ಕಟ್ಟಡಕ್ಕೆ ಹಾನಿಯಾಗಿದೆ.

ಮಳೆ ರಜೆ ಹಿನ್ನೆಲೆಯಲ್ಲಿ ತಪ್ಪಿದ ಅವಘಢ

ಹೆಬ್ರಿ ತಾಲೂಕಿನ ಶಾಲೆಗಳಿಗೆ ಮಳೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಶುಕ್ರವಾರ ರಜೆ ಘೋಷಿಸಿದ್ದರಿಂದ ಶಾಲೆಯಲ್ಲಿ ಮಕ್ಕಳು ಇಲ್ಲದಿರುವ ಸಮಯದಲ್ಲಿ ಮರ ಬಿದ್ದಿರುವುದರಿಂದ ಸಂಭವಿಸಬಹುದಾದ ಭಾರಿ ಅವಘಢ ತಪ್ಪಿದೆ. ಘಟನೆ ಸಂಭವಿಸಿದ ತಕ್ಷಣ ಮುಖ್ಯ ಶಿಕ್ಷಕರು, ಸಹ ಶಿಕ್ಷಕ ವೃಂದವರು, ಶಿಕ್ಷಣ ಇಲಾಖಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು, ಡಿಎಂಸಿಯವರು, ಸ್ಥಳೀಯರು, ಪಾಲಕರು ಆಗಮಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಶಾಲೆ ಬಳಿಯಿದ್ದ ಅಪಾಯಕಾರಿ ಮರ ತೆರವುಗೊಳಿಸುವಂತೆ ಮನವಿ ಸಲ್ಲಿಸಿದ ಹಿನ್ನೆಲೆ ಅರಣ್ಯ ಇಲಾಖೆಯವರು ಮರ ತೆರವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net