

ವಿರಾಜಪೇಟೆ: ಮುಂಗಾರು ಮಳೆ ಪರಿಣಾಮ ವಿರಾಜಪೇಟೆ ನೆಹರುನಗರದಲ್ಲಿ ಸೋಮವಾರ ಭಾರಿ ಗಾತ್ರದ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಿದ್ಯುತ್ ತಂತಿ, ಕಂಬಗಳು ತುಂಡಾಗಿವೆ.
ನೆಹರುನಗರದ ನಿವಾಸಿ ಮೂಸ ಅವರ ಮನೆಗೆ ತೆರಳುವ ಮಾರ್ಗದಲ್ಲಿ ಭಾರಿ ಮಳೆ ಸುರಿದ ಪರಿಣಾಮ ಬೃಹತ್ ಗಾತ್ರದ ಮರ ನೆಲಕ್ಕೆ ಉರುಳಿದೆ. ಸ್ಥಳಕ್ಕೆ ವಿರಾಜಪೇಟೆ ನಗರದ ರೆಸ್ಕ್ಯೂ ತಂಡದ ಸದಸ್ಯರು ಧಾವಿಸಿ ಇದೀಗ ಮರ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಸೆಸ್ಕ್ ಸಿಬ್ಬಂದಿ ಆಗಮಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.