

ಸೋಮವಾರಪೇಟೆ: ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸೋಮವಾರಪೇಟೆ-ಮಡಿಕೇರಿ ಹೆದ್ದಾರಿ ಸಂಚಾರ ವ್ಯವಸ್ಥೆ ಕೆಲ ಸಮಯ ಅಸ್ತವ್ಯಸ್ತಗೊಂಡಿತು.
ಸೋಮವಾರಪೇಟೆ ಸಮೀಪ ಕಾಜೂರು ಜಂಕ್ಷನ್ ಬಳಿ ಅರಣ್ಯ ಇಲಾಖೆ ವಸತಿ ಗೃಹದ ಎದುರು ಶನಿವಾರ ಬೆಳಗ್ಗೆ ಬೃಹತ್ ಅರಳಿ ಮರ ರಸ್ತೆಗೆ ಉರುಳಿ ಬಿದ್ದಿದೆ. ಇದೇ ಸಂದರ್ಭ ಕೆಲವೇ ಸೆಕೆಂಡುಗಳ ಅಂತರದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು ಕೂದಲೆಳೆ ಅಂತರದಿಂದ ಪಾರಾಗಿದೆ. ಈ ಸಂದರ್ಭ ರಾಜ್ಯ ಹೆದ್ದಾರಿಯಲ್ಲಿ ಬಹುತೇಕ ವಾಹನಗಳು ನಿಲುಗಡೆಗೊಂಡವು. ತಕ್ಷಣವೇ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಪಿ.ಎಂ.ಉಲ್ಲಾಸ್ ಮತ್ತು ಸಿಬ್ಬಂದಿ ಹಾಗೂ ಗ್ರಾಮದ ಯುವಕರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.