ಅಭಿವೃದ್ಧಿ ಹೆಸರಲ್ಲಿ ಮರಗಳ ಹನನ

tree cutting
Published on

ಬೆಳ್ಮಣ್: ಒಂದೆಡೆ ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಯಾಗುತ್ತಿರುವ ಖುಷಿ, ಇನ್ನೊಂದೆಡೆ ನೂರಾರು ವರ್ಷಗಳಿಂದ ಬೆಳೆದು ನಿಂತ ಬೃಹತ್ ಮರಗಳು ಅಭಿವೃದ್ಧಿ ನೆಪದಲ್ಲಿ ಧರೆಗುರುಳುತ್ತಿರುವ ಬೇಸರ.

ಬೆಳ್ಮಣ್ ಪೇಟೆಯಿಂದ ಜಂತ್ರ ತನಕ ಅಂಕುಡೊಂಕಾಗಿದ್ದ ರಸ್ತೆ ವಿಸ್ತರಣೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು ರಸ್ತೆ ಪಕ್ಕ ಬೆಳೆದು ನಿಂತಿದ್ದ ಬೃಹತ್ ಮರಗಳನ್ನು ಕಡಿದು ಹಾಕಲಾಗಿದೆ. ಬೆಳ್ಮಣ್‌ನಿಂದ ಶಿರ್ವ ತನಕ ಸಾಗುವ ಈ ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ ಅರ್ಧ ಕಿ.ಮೀ. ಅಂತರದಲ್ಲೇ 42 ಮರಗಳನ್ನು ಕಡಿಯಲಾಗಿದೆ.

ಬೆಳ್ಮಣ್-ಜಂತ್ರ ರಸ್ತೆ ತಿರುವು ಮುರುವಿನಿಂದ ಕೂಡಿದ್ದು ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ಅಪಘಾತದಿಂದ ನಿರಂತರ ಸಾವು ನೋವು ಸಂಭವಿಸಿದೆ. ಕಳೆದ ಬಾರಿ ಬೈಕ್ ಸವಾರನೊಬ್ಬ ಬಸ್‌ನಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಸ್ -ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಳು.

ಇಲಾಖಾ ಅನುಮತಿಯಂತೆ ರಸ್ತೆಯುದ್ದಕ್ಕೆ 42 ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಪರವಾನಗಿ ನೀಡಿದ್ದು, ಕಡಿದ ಮರಗಳನ್ನು ಡಿಪೋಗೆ ಕಳುಹಿಸಲಾಗಿದೆ. ಮುಂದೆ ರಸ್ತೆ ವಿಸ್ತರಣೆಗೊಂಡ ಬಳಿಕ ಮತ್ತೆ ಗಿಡಗಳನ್ನು ಬೆಳೆಸಲಾಗುವುದು.

ಪ್ರಕಾಶ್ಚಂದ್ರ

ಬೆಳ್ಮಣ್ ಉಪವಲಯ ಅರಣ್ಯಾಧಿಕಾರಿ

ರಸ್ತೆ ವಿಸ್ತರಣೆ ಒಳ್ಳೆಯದೇ. ಆದರೆ ಬೆಳೆದು ನಿಂತಿದ್ದ ಅದೆಷ್ಟೋ ಮರಗಳು ಅಭಿವೃದ್ಧಿ ಹೆಸರಲ್ಲಿ ಧರೆಗೆ ಉರುಳುತ್ತಿರುವುದು ಬೇಸರದ ಸಂಗತಿ.

ಸತೀಶ್, ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net