

ಮೈಸೂರು: ಮರವೊಂದು ಟೊಳ್ಳಾಗಿ ಬಿರುಕು ಬಿಟ್ಟಿದ್ದು, ಯಾವ ಸಮಯದಲ್ಲಾದರೂ ಇದು ಬೀಳುವ ಸಂಭವವಿದ್ದು, ಸ್ಥಳೀಯ ನಿವಾಸಿಗಳು ಜೀವ ಭಯದಲ್ಲಿ ಬದುಕುತ್ತಿದ್ದಾರೆ
ಕುವೆಂಪುನಗರದ ಮನೆ ನಂ. 648/ಎ ಜ್ಞಾನಗಂಗಾ ಶಾಲೆಯ ಬಸ್ ನಿಲ್ದಾಣದ ಪಕ್ಕದಲ್ಲೆ ಇರುವ ವಾಸು ಅಗರಬತ್ತಿಯ ಮಾಲೀಕರಾದ ಸುಮಾಕೃಷ್ಣ ಅವರಿಗೆ ಸೇರಿರುವ ಮನೆಯ ಗೋಡೆಯ ಪಕ್ಕದಲ್ಲೆ ಈ ಮರವಿದ್ದು, ಯಾವ ಸಮಯದಲ್ಲಾದರೂ ಬೀಳುವ ಸಂಭವವಿದೆ.
ಈ ಬಗ್ಗೆ ಹಲವಾರು ಬಾರಿ ಅರಣ್ಯ ಇಲಾಖೆಗೆ, ನಗರಪಾಲಿಕೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಈ ಮರವು ಟೊಳ್ಳಾಗಿ ಬಿರುಕು ಬಿಟ್ಟಿದೆ, ಜೋರಾಗಿ ಗಾಳಿ, ಮಳೆ ಬಂದರೆ ಮರ ಬೀಳಲಿದೆ ಎಂದು ಸುಮಾಕೃಷ್ಣ ಅವರು ದೂರಿದ್ದಾರೆ.
ಈ ಕೂಡಲೇ ಸಂಬಂಧಪಟ್ಟ ಇಲಾಖೆಯವರು ಹಾಗೂ ಅಧಿಕಾರಿಗಳು ಈ ಮರವನ್ನು ತೆರವುಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.