

ಮಡಿಕೇರಿ:
ಸುಮಾರು 2 ಶತಮಾನಕ್ಕೂ ಹೆಚ್ಚು ಹಳೆಯದ್ದು ಎನ್ನಲಾದ ಅತ್ತಿ ಮರವೊಂದು ಮಡಿಕೇರಿಯಲ್ಲಿ ಬುಧವಾರ ಮಧ್ಯಾಹ್ನ ಧರಾಶಾಹಿಯಾಗಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ, ಮತ್ತು ಗಾಳಿಯಿಂದಾಗಿ ಮ್ಯಾನ್ಸ್ ಕಾಂಪೌAಡ್ ಬಳಿಯ ಕೊಡವ ಕೋಲ್ ಮಂದ್‌ನಲ್ಲಿ ಇದ್ದ ಈ ಬೃಹತ್ ಗಾತ್ರದ ಮರ ಬಿದ್ದಿದೆ.
ಈ ವ್ಯಾಪ್ತಿಯಲ್ಲಿರುವ ಶಾಲೆಯ ಮಕ್ಕಳು ಸೇರಿದಂತೆ ಇಲ್ಲಿ ಸುತ್ತಾಡುವವರಿಗೆ ಬಿಸಿಲಿನಲ್ಲಿ ನೆರಳಿನ ಆಸರೆಯನ್ನು ಈ ಮರ ಕೊಡುತ್ತಿತ್ತು ಎಂದು ಸಮಾಜ ಸೇವಕ ಪಿ.ಎಂ. ರವಿ ನೆನಪಿಸಿಕೊಂಡಿದ್ದಾರೆ.