

ಸಿದ್ದಾಪುರ:
ಎಸ್ಸೆಸ್ಸೆಫ್ ವಿರಾಜಪೇಟೆ ಡಿವಿಷನ್ ಸಮಿತಿ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಗೋಲ್ಡನ್ ಟ್ರೀ ವಿತರಣೆ ಹಾಗೂ ಸೆಮಿನಾರ್ ಕಾರ್ಯಕ್ರಮನ್ನು ಹುಂಡಿಯಲ್ಲಿ ಇರುವ ಹಿದಾಯತ್ ಇಸ್ಲಾಂ ಮದ್ರಸದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ಡಿವಿಷನ್ ಅಧ್ಯಕ್ಷ ಕಮರುದ್ದೀನ್ ಅನ್ವಾರಿ ಮಾಲ್ದಾರೆ ಮಾತನಾಡಿ ಪರಿಸರ ದಿನದಂದು ಕೇವಲ ಸಸಿಗಳನ್ನು ನೆಡುವುದು ಮಾತ್ರವಲ್ಲ ಅದನ್ನು ಪೋಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಒಂದು ಮರದಿಂದ ಕೇವಲ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ಉಪಕಾರ ಲಭಿಸಲಿದೆ ಆದ್ದರಿಂದ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ ಎಂದರು.
ಡಿವಿಷನ್ ಕಾರ್ಯದರ್ಶಿ ಸಾಬಿತ್, ಪ್ರಧಾನ ಕಾರ್ಯದರ್ಶಿ ರಶಾದ್, ಡಿವಿಷನ್ ವ್ಯಾಪ್ತಿಯ ೫ ಸೆಕ್ಟರ್ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.