ಸತ್ತಾರುಮೇಡು ಗ್ರಾಮದಲ್ಲಿ ಚಿಕಿತ್ಸಾ ಕಾರ್ಯ ಆರಂಭ

04 HANUR 3
ಸತ್ತಾರುಮೇಡು ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರ ಬಾಗಿಲು ತೆರೆದು ಚಿಕಿತ್ಸಾ ಕಾರ್ಯವನ್ನು ಆರಂಭಿಸಲಾಯಿತು.
Published on

ಹನೂರು: ತಾಲೂಕಿನ ಸತ್ತಾರುಮೇಡು ಗ್ರಾಮದ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರ ಶುಕ್ರವಾರ ಬಾಗಿಲು ತೆರೆದಿದ್ದು, ಚಿಕಿತ್ಸಾ ಕಾರ್ಯವನ್ನು ಆರಂಭಿಸಿದೆ.

ಕೌದಳ್ಳಿ ಸಮೀಪದ ಈ ಉಪಕೇಂದ್ರಕ್ಕೆ ಸತ್ತಾರಮೇಡು ಸೇರಿದಂತೆ ಪುದುನಗರ, ಮಲ್ಲಯ್ಯನಪುರ, ದೊಮ್ಮನಗದ್ದೆ ಸೇರಿದಂತೆ ಈ ಭಾಗದ ಇನ್ನಿತರ ಗ್ರಾಮದ ಜನರು ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದು, ಇದರಲ್ಲಿ ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಉಪಕೇಂದ್ರವನ್ನು ಅವಲಂಬಿಸಿದ್ದರು. ಆದರೆ ಇಲ್ಲಿನ ಶ್ರುಶೂಷಕಿಯನ್ನು ಮ.ಬೆಟ್ಟದಲ್ಲಿ ನಡೆದ ಯುಗಾದಿ ಜಾತ್ರೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಸೇವಾ ಕಾರ್ಯದ ಮೇಲೆ ನಿಯೋಜಿಸಲಾಗಿತ್ತು. ಇದರಿಂದ ಕಳೆದ 3 ದಿನಗಳಿಂದ ಕೇಂದ್ರ ಬಾಗಿಲು ಮುಚ್ಚಿತ್ತು. ವೃದ್ಧರು ನರ್ಸ್ ಬರುತ್ತಾರೆ ಎಂದು ಕೇಂದ್ರದ ಮುಂಭಾಗ ನಿತ್ಯ ಗಂಟೆಗಟ್ಟಲೇ ಕಾದು ಕುಳಿತು ಚಿಕಿತ್ಸೆ ದೊರಕದೆಯೇ ಮನೆಗೆ ಹಿಂದಿರುಗುವುದರ ಜತೆಗೆ ತೊಂದರೆ ಅನುಭವಿಸುವಂತಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಕೇಳಿ ಬಂದಿತ್ತು.

ಈ ಬಗ್ಗೆ ಗುರುವಾರದ ವಿಜಯವಾಣಿ ಸಂಚಿಕೆಯಲ್ಲಿ ಸತ್ತಾರಮೇಡು ಆರೋಗ್ಯ ಸಹಾಯಕಿಯರ ಉಪಕೇಂದ್ರ ಬಂದ್ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರಂ ಅವರು ಅಗತ್ಯ ಕ್ರಮವಹಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್ ಅವರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ನರ್ಸ್ ಕೇಂದ್ರಕ್ಕೆ ಆಗಮಿಸಿದ್ದು, ಬಾಗಿಲು ತೆರೆದು ಚಿಕಿತ್ಸೆಯನ್ನು ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net