

ಉಡುಪಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಅನ್ನನಾಳದ ರಂಧ್ರದ ತೊಂದರೆಗೆ ನವೀನ ಎಂಡೊಸ್ಕೋಪಿಕ್ ಚಿಕಿತ್ಸೆ ಯಶಸ್ವಿಯಾಗಿ ನಿರ್ವಹಿಸಿದ್ದು, ದಕ್ಷಿಣ ಭಾರತದ ವೈದ್ಯಕಿಯ ಅಭ್ಯಾಸದಲ್ಲಿ ಇದೊಂದು ಮೈಲಿಗಲ್ಲು ದಾಖಲಿಸಲಾಗಿದೆ.
ಇತ್ತೀಚೆಗೆ ವಯಸ್ಕ ರೋಗಿಯೊಬ್ಬರು ಅನ್ನನಾಳದ ರಂಧ್ರದ ಗಂಭೀರ ಸ್ಥಿತಿಯಲ್ಲಿ ವೈದ್ಯಕಿಯ ಗ್ಯಾಸ್ಟ್ರೊಎಂಟರಾಲಜಿ ವಿಭಾಗಕ್ಕೆ ದಾಖಲಿಸಲಾಗಿದ್ದರು, ಗ್ಯಾಸ್ಟ್ರೋ ಎಂಟೆರೊಲೊಜಿ ವಿಭಾಗದ ಪ್ರಾಧ್ಯಾಪಕ ಡಾ.ಶಿರನ್ ಶೆಟ್ಟಿ ನೇತೃತ್ವದಲ್ಲಿ ವೈದ್ಯಕಿಯ ತಂಡವು ರೋಗಿಯ ಸ್ಥಿತಿಯನ್ನು ತ್ವರಿತವಾಗಿ ಮೌಲ್ಯಮಾಪನ ಮಾಡಿ, ಮೇಲ್ಭಾಗದ ಜಠರಗರುಳಿನ ಎಂಡೋಸ್ಕೋಪಿಯನ್ನು ನಡೆಸಿದೆ. ಶಸ್ತ್ರಚಿಕಿತ್ಸೆ ಬದಲಾಗಿ ರಂಧ್ರ ಸ್ಥಳದ ಮೇಲೆ ಸಂಪೂರ್ಣವಾಗಿ ಮುಚ್ಚಿದ ಲೋಹದ ಸ್ಟೆಂಟ್ ಇರಿಸುವ ನವೀನ ವಿಧಾನ ಅಳವಡಿಸಲಾಗಿದೆ.
ಡಾ.ಬಾಲಾಜಿ, ಡಾ.ಸುಜಯ್ ಪ್ರಭಾತ್, ಡಾ.ಪ್ರವಿಣ್, ಡಾ.ಅಭಯ್, ಡಾ.ಶ್ರೀಮಾನ್ , ಡಾ. ಸಚಿನ್ (ಅರಿವಳಿಕೆ), ಮತ್ತು ಡಾ. ಶ್ವೇತಾ ಅವರ ಸಾಧನೆಯನ್ನು ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಗಣೇಶ್ ಭಟ್ ಶ್ಲಾಘಿಸಿದ್ದಾರೆ.
ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು, ಎಕ್ಸ್-ಟ್ಯಾಕ್ ವ್ಯವಸ್ಥೆಯಂತಹ ಅತ್ಯಾಧುನಿಕ ತಂತ್ರಗಳ ಯಶಸ್ವಿ ಅನುಷ್ಠಾನವು ಅನ್ನನಾಳದ ರಂಧ್ರಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪ್ರಗತಿಯಾಗಿದೆ. ಈ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.