

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಭೌತಿಕ ದಿನದ ಪ್ರಯುಕ್ತ ಎಸ್ಡಿಎಂ ಭೌತಿಕ ಚಿಕಿತ್ಸಾ ಸಂಸ್ಥೆ ವತಿಯಿಂದ ಸೆ. 5ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಉಚಿತ ಭೌತಿಕ ಚಿಕಿತ್ಸಾ ಮತ್ತು ಸಲಹಾ ಶಿಬಿರವನ್ನು ಹುಬ್ಬಳ್ಳಿ ವಿದ್ಯಾನಗರದ ಎಸ್ಡಿಎಂ ಪಾಲಿ ಕ್ಲಿನಿಕ್ನಲ್ಲಿ ಆಯೋಜಿಸಿದ್ದಾರೆ.
ಬೆನ್ನು ನೋವು, ಮೂಳೆ ಮತ್ತು ನರಗಳ ಸಂಬಂಧಿತ, ಬೆನ್ನು ಹುರಿ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಮಾಡಬೇಕಾದ ಮತ್ತು ಸಮಸ್ಯೆಗಳಿದ್ದವರು ಮಾಡಬಾರದ ವಿಚಾರಗಳನ್ನು ತಜ್ಞ ಭೌತಿಕ ಚಿಕಿತ್ಸಕರಿಂದ ಚಿಕಿತ್ಸೆ, ಸಲಹೆ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.