ಮಹಿಳೆಯರನ್ನು ಗೌರವದಿಂದ ಕಾಣಿ

Treat women with respect Treat women with respect
ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ.ಬಿ. ಗ್ರಾಮದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯ ಆರ್​.ಎಸ್​.ಪಾಟೀಲ ಕೂಚಬಾಳ ಮಾತನಾಡಿದರು. ಹಾಸಿಂಪೀರ ವಾಲಿಕಾರ, ಸಂಗನಬಸವ ಶ್ರೀಗಳು, ಅಭಿನವ ರುದ್ರಮುನಿ ಶಿವಾಚಾರ್ಯರು,ಅಭಿನವ ಬಸವಣ್ಣಪ್ಪಜ್ಜ ಶ್ರೀಗಳು, ವೀರಭದ್ರಯ್ಯ ಶ್ರೀಗಳು ಇತರರಿದ್ದರು.
Published on

ಬಸವನಬಾಗೇವಾಡಿ: ಮಹಿಳೆಯರನ್ನು ದೇವರ ಸ್ವರೂಪಿಯಾಗಿ ಪೂಜಿಸಬೇಕು. ಮಹಿಳೆಯರನ್ನು ಪೂಜ್ಯನಿಯ ಭಾವದಿಂದ ಗೌರವಿಸಬೇಕು ಎಂದು ತಾಳಿಕೋಟೆಯ ಖಾಸ್ಗತೇಶ್ವರಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು.

ತಾಲೂಕಿನ ಹುಣಶ್ಯಾಳ ಪಿ.ಬಿ.ಗ್ರಾಮದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಬಸವನಾಡು ನವರಾತ್ರಿ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬಿಜೆಪಿ ಜಿಲ್ಲಾಧ್ಯ ಆರ್​.ಎಸ್​. ಪಾಟೀಲ ಕೂಚಬಾಳ ಮಾತನಾಡಿ, ನವರಾತ್ರಿ ಉತ್ಸವ ಆಚರಣೆ ಸನಾತನ ಸಂಸತಿ ಉಳಿಸುವುದಾಗಿದೆ. ಮಹಿಳೆಯರನ್ನು ಪೂಜ್ಯನಿಯ ಭಾವದಿಂದ ಕಾಣಬೇಕು. ದುಷ್ಟಶಕ್ತಿಯ ಸಂಹಾರ ಮಾಡುವುದೇ ನವರಾತ್ರಿ ಆಚರಣೆ ಉದ್ದೇಶವಾಗಿದೆ ಎಂದರು.

ಹುಣಶ್ಯಾಳ ಶ್ರೀಮಠದ ಶ್ರೀಗಳು ಬಸವನಾಡು ನವರಾತ್ರಿ ಉತ್ಸವ ಕಾರ್ಯಕ್ರಮ ಆಯೋಜಿಸುವ ಮೂಲಕ ನವರಾತ್ರಿ ಉತ್ಸವದ ಆಚರಣೆಯ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಹುಪ್ರಾಚಿನ ಇತಿಹಾಸ ಹೊಂದಿರುವ ನವರಾತ್ರಿ ಉತ್ಸವವನ್ನು ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನವಾಗಿ ಆಚರಿಸುತ್ತಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯ ಹಾಸಿಂಪೀರ ವಾಲಿಕಾರ ಮಾತನಾಡಿ, ಕುಟುಂಬದ ಮಹಿಳೆಯರನ್ನು ನವರಾತ್ರಿ ದೇವತೆಯಂತೆ ಕಾಣಬೇಕು. ಗೌರವದಿಂದ ಕಾಣಬೇಕು. ದೇವ ಭಯವಿರಬೇಕು. ನ್ಯಾಯಸಮ್ಮತ ಕಾರ್ಯದಲ್ಲಿ ತೊಡಗಿಸಿಕೊಂಡಿರಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಯರನಾಳದ ಸಂಗನಬಸವ ಶ್ರೀಗಳು, ಮುತ್ತಗಿ ಅಭಿನವ ರುದ್ರಮುನಿ ಶಿವಾಚಾರ್ಯರು, ಧಾರವಾಡ ಕಲ್ಯಾಣಪೂರದ ಅಭಿನವ ಬಸವಣ್ಣಪ್ಪಜ್ಜ ಶ್ರೀಗಳು, ಚಿಕ್ಕ ಆಸಂಗಿಯ ವೀರಭದ್ರಯ್ಯ ಶ್ರೀಗಳು ಆಶೀರ್ವಚನ ನೀಡಿದರು.

ಶಿವಾನಂದ ಮಂಗಾನವರ ಹಾಗೂ ಮಹೆತಾಬ ಕಾಗವಾಡ ಜಾನಪದ ಹಾಗೂ ತತ್ವಪದ ಹಾಡಿ ರಂಜಿಸಿದರು. ಕಸಾಪ ತಾಲೂಕು ಟಕದ ಅಧ್ಯ ಶಿವಾನಂದ ಡೋಣೂರ, ಕೋಶಾಧ್ಯಕ ಬಸವರಾಜ ಮೇಟಿ, ಶಿವಯ್ಯ ಹಿರೇಮಠ, ಸಾಹಿತಿ ಗಿರಿಜಾ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net