ಎಲ್ಲ ಸರ್ಕಾರಿ ನೌಕರರಂತೆ ನಮ್ಮನ್ನು ಪರಿಗಣಿಸಿ

Treat us like all government employees.
Treat us like all government employees.
Published on

ಇಳಕಲ್ಲ(ಗ್ರಾ): ರಾಜ್ಯದ ಎಲ್ಲ ಸರ್ಕಾರಿ ನೌಕರರಂತೆ ನಮ್ಮನ್ನು ಪರಿಗಣಿಸಬೇಕು ಎಂದು ಪೌರಸೇವಾ ನೌಕರರು ಸ್ಥಳೀಯ ನಗರಸಭೆ ಆವರಣದಲ್ಲಿ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.

ಚಿತ್ರದುರ್ಗ ರಾಜ್ಯ ಪೌರಸೇವಾ ನೌಕರರ ಸಮ್ಮೇಳನದಲ್ಲಿ ಮಂಡಿಸಿದ 19 ಬೇಡಿಕೆಗಳನ್ನು ಈಡೇರಿಸಬೇಕು. ಅಲ್ಲಿಯವರೆಗೆ ಎಲ್ಲ ಸಿಬ್ಬಂದಿ ಕಪ್ಪು ಬಟ್ಟೆ ಕಟ್ಟಿಕೊಂಡು ಕೆಲಸ ಮಾಡುತ್ತೇವೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಮಾಡಬೇಕಾಗುವುದು ಎಂದು ಎಚ್ಚರಿಸಿದರು.

ಪೌರಸೇವಾ ನೌಕರರ ಸಂಘದ ಅಧ್ಯಕ್ಷೆ ಹುಲಿಗೆಮ್ಮ ಚಲವಾದಿ, ಉಪಾಧ್ಯಕ್ಷ ಬಶೀರ ಕಮಾನಘರ, ಕಾರ್ಯದರ್ಶಿ ಬಸವರಾಜ ಕಿರಗಿ, ಮಂಜುನಾಥ ಮಾದರ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net