ರೋಗಿಗಳನ್ನು ಮಾನವೀಯ ದೃಷ್ಟಿಯಿಂದ ಉಪಚರಿಸಿ

HOSPITAL
ಬಾಗಲಕೋಟೆಯಲ್ಲಿ ಗುಳೇದ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯನ್ನು ಗುರುವಾರ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕ ಎಚ್.ವೈ.ಮೇಟಿ ಉದ್ಘಾಟಿಸಿದರು. ಡಾ. ಬಸವಲಿಂಗ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕಾಡಸಿದ್ಧೇಶ್ವರ ಸ್ವಾಮೀಜಿ, ಮಾಜಿ ಸಚಿವ ಎಸ್.ಆರ್.ಪಾಟೀಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಡಾ.ಉದಯಕುಮಾರ ಗುಳೇದ ಇದ್ದರು.
Published on

ಬಾಗಲಕೋಟೆ: ನಗರದ ಮಹಾವೀರ ರಸ್ತೆಯ ಶಕ್ತಿ ಚಿತ್ರಮಂದಿರ ಪಕ್ಕದಲ್ಲಿರುವ ಗುಳೇದ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯನ್ನು ಗುರುವಾರ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕ ಎಚ್.ವೈ.ಮೇಟಿ ಉದ್ಘಾಟಿಸಿದರು.

ಶಾಸಕ ಎಚ್.ವೈ.ಮೇಟಿ ಮಾತನಾಡಿ, ಎಲ್ಲ ಸೌಲಭ್ಯಗಳು ಇರುವ ಆಸ್ಪತ್ರೆಗಳು ಕಾರ್ಯಾರಂಭ ಮಾಡಿರುವುದು ಜನರಿಗೆ ಅನುಕೂಲವಾಗಿದೆ. ವೈದ್ಯ ಡಾ.ಉದಯಕುಮಾರ ಗುಳೇದ ಅನೇಕ ಕ್ಲಿಷ್ಟಕರ ಶಸಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ರೋಗಿಗಳನ್ನು ಮಾನವೀಯ ದೃಷ್ಟಿಯಿಂದ ಉಪಚರಿಸುವ ಮೂಲಕ ಅವರನ್ನು ಗುಣಪಡಿಸಬೇಕು ಎಂದು ಆಸ್ಪತ್ರೆ ಸಿಬ್ಬಂದಿಗೆ ಸಲಹೆ ನೀಡಿದರು.

ಡಾ.ಉದಯಕುಮಾರ ಗುಳೇದ ಮಾತನಾಡಿ, ಎಲುವು ಕೀಲು ತಜ್ಞರು, ಚಿಕ್ಕಮಕ್ಕಳ ತಜ್ಞರು, ಜನರಲ್ ಮೆಡಿಸಿನ್ ಹಾಗೂ ಸರ್ಜನ್, ಚರ್ಮ ವಿಭಾಗ ತಜ್ಞರು ಆಸ್ಪತ್ರೆಯಲ್ಲಿರಲಿದ್ದಾರೆ. ಇಲ್ಲಿ ಕಣ್ಣು, ಕಿವಿ ಹಾಗೂ ಮೂಗು ಮತ್ತು ಕತ್ತಿಗೆ, ಸ್ಕಲ್ ಬೇಸ್ ಸರ್ಜರಿ, ಜಾಯಿಂಟ್ ರಿಪ್ಲೇಸಮೆಂಟ್ ಸರ್ಜರಿ, ಮೂಳೆ ಶಸ ಚಿಕಿತ್ಸೆ ಸೇರಿದಂತೆ ಅನೇಕ ರೀತಿಯ ಶಸ ಚಿಕಿತ್ಸೆ ಕೈಗೊಳ್ಳಲಾಗುತ್ತದೆ ಎಂದರು.

ಶಿರೂರಿನ ಡಾ. ಬಸವಲಿಂಗ ಸ್ವಾಮೀಜಿ, ಬಿಲ್ ಕೆರೂರಿನ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಗುಳೇದಗುಡ್ಡದ ಕಾಡಸಿದ್ಧೇಶ್ವರ ಸ್ವಾಮೀಜಿ, ಮಾಜಿ ಸಚಿವ ಎಸ್.ಆರ್.ಪಾಟೀಲ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ನಾಗರಾಜ ಹದ್ಲಿ, ವೈದ್ಯರಾದ ಡಾ. ಎಚ್.ಎ್.ಯೋಗಪ್ಪನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net