ಹಿರಿಯರನ್ನು ಗೌರವದಿಂದ ಕಾಣಿ

13 HDLP 01
ಹೂವಿನಹಡಗಲಿ ಶ್ರೀರಾಮದೇವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀರಾಮದೇವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಉಚಿತ ಸಾಮೂಹಿಕ ಕಾರ್ಯಕ್ರಮವನ್ನು ಹಿರೇಮಲ್ಲನಕೇರಿ ಮಠದ ಚನ್ನಬಸವ ಸ್ವಾಮಿಜಿ ಉದ್ಘಾಟಿಸಿದರು. ದೇವಸ್ಥಾನದ ಧರ್ಮಕರ್ತ ಡಾ.ರಾಕೇಶಯ್ಯ ರಾಮಸ್ವಾಮಿ, ಚೌಕಿಮಠದ ಗಾಡಿತಾತ, ತುರುವಿಹಾಳ ಅಮೋಘಸಿದ್ದೇಶ್ವರ ಮಠದ ಗುರು ಚಿದಾನಂದಯ್ಯ, ಹಾಗೂ ಇತರರಿದ್ದರು.
Published on

ಹೂವಿನಹಡಗಲಿ: ಸತಿ-ಪತಿ ಸುಖವಾದ ಜೀವನ ನಡೆಸಬೇಕು ಎಂದು ಹಿರೇಮಲ್ಲನಕೇರಿ ಮಠದ ಚನ್ನಬಸವ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀ ರಾಮದೇವರ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದಂಪತಿ ಮನೆಯ ಹಿರಿಯರನ್ನು ಗೌರವದಿಂದ ಕಾಣುವ ಮೂಲಕ ಎಲ್ಲರೊಂದಿಗೂ ಪ್ರೀತಿಯಿಂದ ಬದುಕಬೇಕು. ಸಾಮೂಹಿಕ ವಿವಾಹಗಳು ಸರಳವಾಗಿದ್ದರೂ ನಿಮ್ಮ ಮುಂದಿನ ಜೀವನ ಸಂಭ್ರಮದಿಂದ ಕೂಡಿರಲಿ ಎಂದರು.

ಧರ್ಮಕರ್ತ ಡಾ.ರಾಕೇಶಯ್ಯ ರಾಮಸ್ವಾಮಿ ಮಾತನಾಡಿ, ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಇಂದಿನ ದಿನಗಳಲ್ಲಿ ಅಧಿಕ ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತವೆ. ನವ ದಂಪತಿ ಒಬ್ಬರನೊಬ್ಬರು ಅರ್ಥೈಸಿಕೊಂಡು ಜೀವನ ನಡೆಸಬೇಕು ಎಂದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 4 ಜೋಡಿ ನವಜೀವನಕ್ಕೆ ಕಾಲಿರಿಸಿದವು. ಚೌಕಿಮಠದ ಗಾಡಿತಾತ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿಕೆಎಂ ಬಸವಲಿಂಗಯ್ಯ, ಮಾಜಿ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ತಾಪಂ ಮಾಜಿ ಸದಸ್ಯ ಜೆ.ಶಿವರಾಜ, ಪ್ರಮುಖರಾದ ಗುರುವಿನ ರಾಜು, ಮಾಲತೇಶ, ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net