ಖಜಾನೆ ಅಧಿಕಾರಿಗಳು ಲೋಕಾ ಬಲೆಗೆ

Lokayukta trap
Published on

ರಟ್ಟಿಹಳ್ಳಿ: ಪಟ್ಟಣದ ತಾಲೂಕು ಉಪ ಖಜಾನೆ ಇಲಾಖೆಯ ಸಹಾಯಕ ಖಜಾನೆ ಅಧಿಕಾರಿ ಬಸವರಾಜ ಕಡೇಮನಿ ಮತ್ತು ಪ್ರಥಮ ದರ್ಜೆ ಸಹಾಯಕ ಯಲ್ಲಪ್ಪ ಅಮ್ಮಿನಬಾವಿ ಲಂಚ ಸ್ವೀಕರಿಸುವ ವೇಳೆ ಸೋಮವಾರ ಹಾವೇರಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ತಾಲೂಕಿನ ಹಳ್ಳೂರು ಗ್ರಾಮದ ಪಶು ಚಿಕಿತ್ಸಾಲಯದ ಬಿಲ್‌ಗಳನ್ನು ಮಂಜೂರು ಮಾಡಲು ಇಬ್ಬರೂ ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿದ್ದರು. ಆಸ್ಪತ್ರೆ ಪಶುವೈದ್ಯಾಧಿಕಾರಿ ಡಾ. ಅಮೃತರಾಜ ಜಿ.ಕೆ. ಜು. 11 ರಂದು ಖಜಾನೆ ಇಲಾಖೆಗೆ 5 ಬಿಲ್‌ಗಳನ್ನು ಮಂಜೂರಾತಿಗೆ ಸಲ್ಲಿಸಿದ್ದರು. ಈ ವೇಳೆ ಖಜಾನೆ ಅಧಿಕಾರಿಗಳು ಪ್ರತಿ ಬಿಲ್ ಮಂಜೂರಾತಿಗೆ 1200 ರೂಪಾಯಿ ಲಂಚ ನೀಡಲು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ವೈದ್ಯರು ಹಾವೇರಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಡಾ. ಅಮೃತರಾಜ ಜಿ.ಕೆ. ಅವರಿಂದ ಸಹಾಯಕ ಖಜಾನೆ ಅಧಿಕಾರಿ ಬಸವರಾಜ ಕಡೇಮನಿ ಮತ್ತು ಯಲ್ಲಪ್ಪ ಅಮ್ಮಿನಬಾವಿ 1 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರ, ಪೊಲೀಸ್ ಇನ್‌ಸ್ಪೆಕ್ಟರ್ ಮುಸ್ತಾಕ ಅಹ್ಮದ್ ಹಾಗೂ ಸಿಬ್ಬಂದಿ ದಾಳಿ ವೇಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net