ರಾಯಬಾಗದಲ್ಲಿ ಶ್ರೀಗಂಧದ ‌ಮರಗಳ ಕಳ್ಳತನ!

IMG-20240903-WA0004.jpg
Published on

ಬೆಳಗಾವಿ: ರಾಯಬಾಗ ತಾಲೂಕಿನ ಬ್ಯಾಕೂಡ ಗ್ರಾಮದಲ್ಲಿ ರಜನೀಕಾಂತ ಯಾದವಾಡೆ ಎಂಬುವವರ ತೋಟದಲ್ಲಿ ಶ್ರೀಗಂಧ ಮರಗಳ ಕಳ್ಳತನ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತೋಟದಲ್ಲಿ 50 ಶ್ರೀಗಂಧದ ಸಸಿ ನಾಟಿ ಮಾಡಲಾಗಿತ್ತು.. ಅಲ್ಪಸ್ವಲ್ಪ ಬಲಿತ ಗಿಡಗಳು ಈ ಹಿಂದೆ ಎರಡು ಬಾರಿ ಕಳ್ಳತನವಾಗಿವೆ. ಇದೀಗ ಮತ್ತೆ ಎರಡು ಮರಗಳು ಕಳ್ಳತವಾಗಿವೆ. ಶ್ರೀರಂಗಧದ ಮಾರಾಟ ಮಾಡಲು ಅರಣ್ಯ ಇಲಾಖೆ ಅನುಮತಿಯ ನಿರೀಕ್ಷೆಯಲ್ಲಿದ್ದೆವು. ಹೆಚ್ಚಿನ ತಿರುಳು ಇಲ್ಲದಿದ್ದರೂ ಕಳ್ಳರ ಹಾವಳಿ ಕಾರಣಕ್ಕೆ ಅಲ್ಪಸ್ವಲ್ಪ ಬಲಿತ ಗಿಡಗಳನ್ನೆಲ್ಲ ಕಟಾವು ಮಾಡಬೇಕಾಗಿದೆ’

ಅರಣ್ಯ ಇಲಾಖೆಯವರಿಗೆ ದೂರು ನೀಡಲಾಗಿದ್ದು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಉಮೇಶ ಪ್ರಧಾನಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಶಾನೂರ ನಧಾಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳುವು ಆಗಿರುವ ಶ್ರೀಗಂಧ ಕಾಂಡಗಳ ಮೌಲ್ಯವನ್ನು ಸಾಬೂನು ಮತ್ತು ಮಾರ್ಜಕ ತಯಾರಿಕಾ ಕಾರ್ಖಾನೆ ನಿರ್ಧರಿಸಲಿದೆ. ಈ ಕುರಿತು ಪ್ರಕರಣ ದಾಖಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net