ಟ್ರ್ಯಾಕ್ಸ್ ಡಿಕ್ಕಿ ಒರ್ವ ಸಾವು - ಮೂವರಿಗೆ ಗಾಯ

Accident
Published on

ವಿಜಯಪುರ: ಸೇತುವೆ ಮೇಲೆ ಕುಳಿತಿದ್ದ ಯುವಕರ ಮೇಲೆ ಟ್ರ್ಯಾಕ್ಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ತಾಳಿಕೋಟೆಯ ಬೇಲೂರ-ನಾವದಗಿ ರಸ್ತೆಯಲ್ಲಿ ಸೋಮವಾರ ಸಂಭವಿಸಿದೆ.

ಲಾಳೇಮಶಾಕ ಮದನಸಾಬ್ ಬ್ರಹ್ಮದೇವನಮಡು (38) ಮೃತಪಟ್ಟಿದ್ದು, ಗಾಯಗೊಂಡ ಹಜಿಮಲಂಗ ನದಾಫ್¨, ರಮಜಾನ್ ನದಾಫ್ ಹಾಗೂ ಯಾಸೀನ ಕಾರಕೂನ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟ್ರಾಕ್ಸ್ ಚಾಲಕ ಹಣಮಂತ್ರಾಯ ಗಸ್ತಿಗಾರ ಬೇಲೂರು ರಸ್ತೆಯಲ್ಲಿ ತೆರಳುವಾಗ ವಾಹನ ನಿಯಂತ್ರಣ ತಪ್ಪಿ ಸೇತುವೆ ಬಳಿ ನಿಂತಿದ್ದ ಹಾಗೂ ಬೈಕ್‌ನಲ್ಲಿ ಕುಳಿತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಬೈಕ್ ಮೇಲೆ ಕುಳಿತಿದ್ದವ ಮೃತಪಟ್ಟರೆ, ಉಳಿದ ಮೂವರು ಗಾಯಗೊಂಡಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net