ಬೈಕ್ ಅಪಘಾತದಲ್ಲಿ ಟ್ರಾವೆಲ್ಸ್‌ ಮಾಲೀಕ ಕಾಶಿಮಠ ಸತ್ಯನಾರಾಯಣ ಭಟ್ ಸಾವು

IMG-20220718-WA0012
Published on

ವಿಟ್ಲ: ಅನ್ನಪೂರ್ಣ ಟ್ರಾವೆಲ್ಸ್ ಮಾಲೀಕ ಕಾಶಿಮಠ ಸತ್ಯನಾರಾಯಣ ಭಟ್(54) ಬೈಕ್ ಸ್ಕಿಡ್ ಆಗಿ ಮೃತರಾದ ಘಟನೆ ಜು.17 ರಂದು ನಡೆದಿದೆ. ಸತ್ಯನಾರಾಯಣ ಭಟ್ ಅವರು ಕನ್ಯಾನದಿಂದ ವಿಟ್ಲ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡ ಅವರು ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net