ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ

13telsang1
Published on

ತೆಲಸಂಗ: ರೈತರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪಿಕೆಪಿಎಸ್ ನಿರ್ದೇಶಕ ಅಶೋಕ ಉಂಡೋಡಿ ಹೇಳಿದರು.

ಗ್ರಾಮದ ಪಿಕೆಪಿಎಸ್ ಮೂಲಕ 2024-25ನೇ ಸಾಲಿನ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಎ್ಎಕ್ಯೂ ಗುಣಮಟ್ಟದ ತೊಗರಿ ಕ್ವಿಂಟಾಲ್‌ಗೆ 8 ಸಾವಿರ ರೂ. ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್ ತೊಗರಿಗೆ 7,550 ರೂ. ಹಾಗೂ ರಾಜ್ಯ ಸರ್ಕಾರ 450 ರೂ. ಪ್ರೋತ್ಸಾಹಧನ ನೀಡುತ್ತಿದೆ ಎಂದರು.

ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕಡಲೆಗೆ 6 ಸಾವಿರ ರೂ. ಮೇಲ್ಪಟ್ಟು ದರವಿದ್ದು, ಆದರೆ, ಬೆಂಬಲ ಬೆಲೆಯಲ್ಲಿ ಸದ್ಯ ಸರ್ಕಾರ ನೀಡುತ್ತಿರುವ ಬೆಲೆಯಲ್ಲಿ ಕನಿಷ್ಠ 10 ಸಾವಿರ ರೂ. ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು.

ಅಥಣಿಯ ಕರ್ನಾಟಕ ಮಾರಾಟ ಮಹಾ ಮಂಡಳದ ಶಾಖಾ ವ್ಯವಸ್ಥಾಪಕ ಹನುಮಂತ ಗಡದೆ, ಅನಿಲ ಕರ್ಣಿ, ಗುಂಡುಬಾ ಪವಾರ, ಶಂಕರ ಮೆಣಸಂಗಿ, ರಾವಸಾಬ ದಶವಂತ, ಬಸವರಾಜ ಕಳಸಗೊಂಡ, ಸುಬಾಸ ಖೊಬ್ರಿ, ಗೋಪಾಲ ಶೆಲ್ಲೆಪ್ಪಗೋಳ, ಭೀಮಪ್ಪ ಹದ್ನೂರ, ಹನುಮಂತ ಕೊಟ್ಟಲಗಿ, ಜಗದೀಶ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net