

ಚಿತ್ರದುರ್ಗ: ನೂರಾರು ಅದಿರು ಲಾರಿಗಳ ನಿರಂತರ ಸಂಚಾರದಿಂದ ಭೀಮಸಮುದ್ರದ ಹತ್ತಾರು ಹಳ್ಳಿಗಳ ಜನರ ಜೀವನ ಬದುಕು ಅತ್ಯಂತ ದುರ್ಭರವಾಗುತ್ತಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಪ್ರೊ,ಜೆ.ಯಾದವರೆಡ್ಡಿ ಆತಂಕ ವ್ಯಕ್ತಪಡಿಸಿದರು.
ಚಿತ್ರದುರ್ಗ ತಾಲೂಕಲ್ಲಿ ಆಗುತ್ತಿರುವ ಅದಿರು ಗಣಿಗಾರಿಕೆಯಿಂದ ಪರಿಸರ ಮತ್ತು ಜನರ ಬದುಕಿನ ಮೇಲಾಗುತ್ತಿರುವ ದುಷ್ಪರಿಣಾ ಮಗಳ ಕುರಿತಂತೆ ಡಿ.10ರಂದು ಸತ್ಯಶೋಧನಾ ಸಮಿತಿ ಹಲವು ಹಳ್ಳಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಗಣಿಗಾರಿಕೆ ಪ್ರದೇಶದಿಂ ದ ದಿನವೊಂದಕ್ಕೆ ಅಂದಾಜು 600 ಅದಿರು ತುಂಬಿದ ಹಾಗೂ ಆನ್‌ಲೋಡ್ ಆದ ಲಾರಿಗಳು ಈ ಭಾಗದಲ್ಲಿ ಎಡಬಿಡದೆ ಸಂಚರಿಸುತ್ತಿ ದ್ದು,ಜನರ ಬದುಕು ಅತ್ಯಂತ ಅಪಾಯಕಾರಿ ಸ್ಥಿತಿಗೆ ತಲುಪುತ್ತಿದೆ.
ಆದಂಥ ಹಲವು ಅಪಘಾತಗಳಿಂದಾಗಿ ಅನೇಕ ಕುಟುಂಬಗಳ ಬದುಕು ನಾಶವಾಗಿದೆ. ಅನೇಕರು ಕ್ಯಾನ್ಸರ್ ಮತ್ತಿತರ ಗಂಭೀರ ಕಾ ಯಿಲೆಗಳಿಗೆ ತುತ್ತಾಗಿದ್ದಾರೆ ಎಂದು ಅಪಘಾತಗಳು ಮತ್ತು ಕಾಯಿಲೆಗಳಿಂದ ನೋವನ್ನು ಅನುಭವಿಸಿರುವ ಹಲವು ಕುಟುಂಬಗಳ ಹೃದ ಯ ವಿದ್ರಾವಕ ಘಟನೆಗಳನ್ನು ರೆಡ್ಡಿ ವಿವರಿಸಿದರು.
ಕಾನೂನು ಚೌಕಟ್ಟಿನಲ್ಲಿ ನಡೆಯುವ ಗಣಿಗಾರಿಕೆಗೆ ನಮ್ಮ ವಿರೋಧವಿಲ್ಲ. ಆದರೆ ಆ ಭಾಗದಲ್ಲಿ ಕಾನೂನು ಎಂಬುದೇ ಇಲ್ಲ.ಅಪಘಾ ತ ಪ್ರಕರಣಗಳು ದಾಖಲಾಗುವುದಿಲ್ಲ,ಎಲ್ಲವೂ ಸೆಟ್ಲಮೆಂಟ್‌ನಲ್ಲೇ ಬಗೆಹರಿಯುತ್ತವೆ. ರಾಜೀ ಸಂಧಾನಕ್ಕೆಂದೇ ತೋಳ್ಬಲ,ಹಣ ಬಲ ಹಾ ಗೂ ರಾಜಕೀಯ ಪ್ರಭಾವ ಬಳಸಲಾಗುತ್ತಿದೆ ಎಂದು ದೂರಿದರು.
ಪ್ರೊ.ಸಿ.ಕೆ.ಮಹೇಶ್‌ಮಾತನಾಡಿ,ಅದಿರು ಲಾರಿಗಳಿಂದ ಬಡ ಕುಟುಂಬಗಳಿಗೆ ಹೆಚ್ಚಿನ ತೊಂದರೆ ಆಗುತ್ತಿದೆ. ಆದ್ದರಿಂದಲೇ ಈ ಹಳ್ಳಿ ಗಳಲ್ಲಿ ಆಗುತ್ತಿರುವ ಸಾವು-ನೋವುಗಳು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿತ್ತು. ಬೌನ್ಸರ್‌ಗಳು ಲಾರಿಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಆಕ್ರೋಶ ವ್ಯಕ್ತಪಡಿಸಿದ ಅವರು,ಸತ್ಯಶೋಧನಾ ಸಮಿತಿ ಸದ್ಯಕ್ಕೆ ಏಳು ಹಳ್ಳಿಗಳಿಗೆ ಭೇಟಿ ನೀಡಿದೆ ಎಂದರು.
18ರಂದು ಸಂವಾದ
ಅಪಾಯಕಾರಿ ಗಣಿಗಾರಿಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಮತ್ತು ಗಣಿಬಾಧಿತ ಗ್ರಾಮಗಳ ಜನಸಾಮಾನ್ಯರ ಬದು ಕಿಗೆ ಎದುರಾಗುತ್ತಿರುವ ಸವಾಲುಗಳ ಕುರಿತಂತೆ ನಗರದ ತರಾಸು ರಂಗಮಂದಿರದಲ್ಲಿ ಡಿ.18 ರಂದು ಬೆಳಗ್ಗೆ 11ಕ್ಕೆ ಸಂವಾದ ಕಾರ‌್ಯಕ್ರಮ ಏರ್ಪಡಿಸಲಾಗಿದೆ ಎಂದು ಹೊಳೆಯಪ್ಪ ಹೇಳಿದರು. ಹೈಕೋರ್ಟ್ ವಕೀಲ ಎಸ್.ಬಾಲನ್,ಪ್ರಗತಿಪರ ಚಿಂತಕ ಕಲ್ಕುಳಿ ವಿಠ್ಠಲ್‌ಹೆಗ್ಡೆ ಮತ್ತಿ ತರರು ಭಾಗವಹಿಸಲಿದ್ದಾರೆ ಎಂದರು. ಮಂಜುನಾಥ್‌ತಾಳಿಕೆರೆ, ಟಿ.ಶಫಿವುಲ್ಲಾ, ಹೊಳಿಯಪ್ಪ,ಮರುಳಸಿದ್ದಪ್ಪ ಇದ್ದರು.
----