ರೈಲಿನಲ್ಲಿ ಗಾಂಜಾ ಸಾಗಾಟ: ಇಬ್ಬರು ಆರೋಪಿಗಳಿಗೆ 12 ವರ್ಷ ಜೈಲು ಶಿಕ್ಷೆ

mysoreDistCourt 4 MAR 20
Published on

ಮೈಸೂರು: ರೈಲಿನಲ್ಲಿ ಗಾಂಜಾ ಸಾಗಾಟ ಮಾಡಿದ್ದ ಒಡಿಶಾ ಮೂಲದ ಇಬ್ಬರು ಅಪರಾಧಿಗಳಿಗೆ ಶನಿವಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಲಾ 12 ವರ್ಷ ಜೈಲು ಶಿಕ್ಷೆ ಹಾಗೂ 1.25 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಒಡಿಶಾ ರಾಜ್ಯದ ಗಜಪತಿ ಜಿಲ್ಲೆಯ ಪನಗುಡಿ ಗ್ರಾಮದ ನಿವಾಸಿ ಸುನಿಲ್ ಬೀರಾ(35) ಮತ್ತು ಚಡಿಯಾಪಡ ಗ್ರಾಮದ ರೋಹಿತ್ ಬೀರ್(22) ಶಿಕ್ಷೆಗೆ ಗುರಿಯಾದವರು. ಇವರಿಬ್ಬರು 13 ಮಾರ್ಚ್ 2022 ರಂದು ರೈಲಿನ ಮೂಲಕ ಮೈಸೂರಿಗೆ 6 ಲಕ್ಷ ರೂ. ಮೌಲ್ಯದ 40 ಕೆ.ಜಿ. ಗಾಂಜಾ ಸಾಗಿಸಿದ್ದರು. ಮೈಸೂರು ರೈಲು ನಿಲ್ದಾಣದಲ್ಲಿ ಇವರನ್ನು ಮೈಸೂರು ರೈಲ್ವೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠ್ ಪ್ರಕರಣದ ವಿಚಾರಣೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಚ್.ಇ. ಚಿನ್ನಪ್ಪ, ರಂಜನ್ ರಾವ್ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net