ಸಾರಿಗೆ ನೌಕರರ ಮುಷ್ಕರ

mm 5-3 (5)
Published on

ವಿಜಯಪುರ:ವೇತನ ಪರಿಷ್ಕರಣೆ, ಬಾಕಿ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ರಾಜ್ಯಾದ್ಯಾಂತ ಸೋಮವಾರ ಹಮ್ಮಿಕೊಂಡಿದ್ದ ಮುಷ್ಕರದ ಬಿಸಿ ವಿಜಯಪುರ ಜಿಲ್ಲಿಯ ಸಾರ್ವಜನಿಕರಿಗೆ ತಟ್ಟಿತು. ಅಗತ್ಯ ಸೇವೆ ಇಲ್ಲದೇ ಸಾರ್ವಜನಿಕರು ಪರದಾಡುವ ದೃಶ್ಯಗಳುಯ ಸಾಮಾನ್ಯವಾಗಿ ಕಂಡು ಬಂದವು.

ಕಳೆದ ಹಲವು ದಿನಗಳಿಂದ ವಿವಿಧ ರೀತಿಯ ಹೋರಾಟ, ಮಾತುಕತೆ ನಡೆಸಿದರೂ ಕೂಡ ಸರ್ಕಾರ ಸ್ಪಂದಿಸದಿದ್ದಾಗ ಬೇಸತ್ತ ಸಾರಿಗೆ ನೌಕರರು, ಕೊನೆಯ ಅಸವಾಗಿ ಮುಷ್ಕರ ಕೈಗೊಂಡರು. ಮುಷ್ಕರ ಹಿನ್ನೆಲೆಯಲ್ಲಿ ಬಹುತೇಕ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗದೇ ಗೈರು ಉಳಿದರು. ಹೀಗಾಗಿ, ದೊಡ್ಡ ಸಂಖ್ಯೆಯ ಬಸ್​ಗಳು ಕೇಂದ್ರ ಬಸ್​ ನಿಲ್ದಾಣದಲ್ಲಿಯೇ ನಿಂತಿರುವುದು ಕಂಡು ಬಂದವು. ಆದರೆ ಕೆಲವು ಚಾಲಕರು ಎಂದಿನಂತೆ ಕರ್ತವ್ಯ ನಿರ್ವಹಿಸಿದರು.

ನಗರದ ಕೇಂದ್ರ ಬಸ್​ ನಿಲ್ದಾಣ, ಸ್ಯಾಟ್​ಲೈಟ್​ ಬಸ್​ ನಿಲ್ದಾಣ ಸೇರಿ ಬಹುತೇಕ ಬಸ್​ ನಿಲ್ದಾಣಗಳು ಬಸ್​ ಸಂಚಾರವಿಲ್ಲದೆ ಸ್ತಬ್ಧಗೊಂಡಿದ್ದವು. ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಾರಿಗೆ ಬಸ್​ಗಳನ್ನೇ ಅವಲಂಬಿಸಿದ ಸಾರ್ವಜನಿಕರು, ವಿವಿಧ ನೌಕರರು ಪರದಾಡುವಂತಾಯಿತು. ಕೇಂದ್ರ ಬಸ್​ ನಿಲ್ದಾಣದಲ್ಲಿ ತುಂಬು ಗರ್ಭಿಣಿಯೊಬ್ಬಳು ಬಸ್​ಗಾಗಿ ಕಾಯುತ್ತಿರುವ ದೃಶ್ಯ ಕಂಡು ಬಂದಿತು. ಅಲ್ಲದೇ, ಸಾರಿಗೆ ಮುಷ್ಕರದ ಮಾಹಿತಿ ತಿಳಿಯದೆ ಬಸ್​ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಸಹಜವಾಗಿ ತೊಂದರೆ ಅನುಭವಿಸಿದರು.

ನಾನು ಸಿಂದಗಿಗೆ ಹೋಗಬೇಕಿತ್ತು. ಮುಷ್ಕರದ ಬಗ್ಗೆ ಮಾಹಿತಿ ಇದ್ದರೆ ಬರುತ್ತಲೇ ಇರಲಿಲ್ಲ. ಆದರೆ ಈಗ ಪುನ: ಊರಿಗೆ ಹೋಗುವುದಕ್ಕೂ ಆಗುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ಅಳಲು ತೋಡಿಕೊಂಡರು.

ಖಾಸಗಿ ವಾಹನಗಳ ಎಂಟ್ರಿ : ಕೇಂದ್ರ ಬಸ್​ ನಿಲ್ದಾಣದಲ್ಲಿ ಖಾಸಗಿ ಸಾರಿಗೆ ವಾಹನಗಳ ಪ್ರವೇಶಕ್ಕೆ ಸಂಪೂರ್ಣ ನಿಷೇಧಿತವಿರುತ್ತದೇ. ಆದರೆ ಮುಷ್ಕರ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಖಾಸಗಿ ಟೆಂಪೋ, ಕ್ರೂಸರ್​ಗಳು ರಾಜಾರೋಷವಾಗಿ ಬಸ್​ ನಿಲ್ದಾಣದಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವ ದೃಶ್ಯಗಳು ಗೋಚರಿಸಿದರವು. ಪ್ರಯಾಣಿಕರು ಸಹ ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗುವಂತಾಯಿತು.

ಶಾಲಾ ಕಾಲೇಜುಗಳು ಎಂದಿನಂತೆ : ಶಾಲಾ ಕಾಲೇಜುಗಳು ಎಂದಿನಂತೆ ಆರಂಭಗೊಂಡಿದ್ದವು. ಮಕ್ಕಳನ್ನು ಪೋಷಕರೇ ಶಾಲೆಗಳಿಗೆ ತಂದು ಬಿಡುವುದು ಸಾಮಾನ್ಯವಾಗಿತ್ತು. ಅಲ್ಲದೇ, ಕೆಲವು ಕಡೆಗಳಲ್ಲಿ ವಿದ್ಯಾರ್ಥಿಗಳು ಆಟೋಗಳ ಮೂಲಕ ಹಾಗೂ ಕಾಲ್ನಡಿಗೆ ಮೂಲಕ ಶಾಲೆಗೆ ಆಗಮಿಸುವ ದೃಶ್ಯಗಳು ಕಂಡುಬಂದವು.

ಇನ್ನು, ತಮ್ಮ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರಾಗಿ ದೂರ ಉಳಿದಿದ್ದಾರೆ. ರಸ್ತೆಗಿಳಿದು ಯಾವುದೇ ಜಾಥಾ, ಪ್ರತಿಭಟನೆ ನಡೆಸಲಿಲ್ಲ. ಯಾವುದೇ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಲಿಲ್ಲ. ಯಾವುದೇ ರೀತಿಯ ಅಹಿತಕರ ಟನೆಗೂ ಆಸ್ಪದ ನೀಡದೆ ಸ್ವಯಂ ಪ್ರೇರಿತವಾಗಿ ಕರ್ತವ್ಯದಿಂದ ದೂರ ಉಳಿದಿದ್ದೇವೆ. ಯಾವ ರೀತಿಯಲ್ಲಿಯೂ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲ್ಲ. ಕರ್ತವ್ಯದಿಂದ ದೂರ ಉಳಿದು ನಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸುತ್ತೇವೆ ಎಂದು ಸಾರಿಗೆ ಇಲಾಖೆಯ ವಿವಿಧ ಕಾರ್ಮಿಕ ಸಂಟನೆಯ ಪದಾಧಿಕಾರಿಗಳು ಮಾಹಿತಿ ನೀಡಿದರು.

ಕೋಟ್​

ಮುಷ್ಕರ ಆರಂಭಕ್ಕೂ ಮುನ್ನ ಬೆಳಗ್ಗೆ 8 ಗಂಟೆವರೆಗೆ ಸುಮಾರು 150 ಅಧಿಕ ಬಸ್​ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಿವೆ. ನಂತರದಿಂದ ಯಾವುದೇ ಬಸ್​ ರಸ್ತೆಗೆ ಇಳಿಯಲಿಲ್ಲ. ಸಂಜೆ 5 ರಿಂದ ಬಸ್​ ಸಂಚಾರ ಆರಂಭಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net