ದಾಖಲೆ ಇಲ್ಲದೆ ದನ ಸಾಗಾಟ

cow
Published on

ಸುಳ್ಯ: ಸಮರ್ಪಕ ದಾಖಲೆಗಳಿಲ್ಲದೆ ದನ ಅಕ್ರಮ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ಸೋಣಂಗೇರಿ ಬಳಿ ತಡೆದ ಘಟನೆ ಮಂಗಳವಾರ ನಡೆದಿದೆ. ಪಿಕಪ್ ವಾಹನದಲ್ಲಿ ದನ ಸಾಗಾಟವಾಗುತ್ತಿರುವುದನ್ನು ಕಂಡು ಕೆಲ ಯುವಕರು ಸೋಣಂಗೇರಿ ಬಳಿಯ ಸುತ್ತುಕೋಟೆ ಎಂಬಲ್ಲಿ ವಾಹನವನ್ನು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಆಗಮಿಸಿ ಪರಿಶೀಲಿಸಿದಾಗ ಅದರಲ್ಲಿದ್ದ ಮರ್ಕಂಜದ ಹೂವಪ್ಪ ಎಂಬುವರು ತಮ್ಮ ಮನೆಯಿಂದ ಪುತ್ತೂರಿಗೆ ಜರ್ಸಿ ದನ ಮತ್ತು ಕರುವನ್ನು ಸಾಕಲು ಕೊಂಡೊಯ್ಯಲಾಗುತ್ತಿದೆ ಎಂದು ತಿಳಿಸಿದರು. ದಾಕಲೆಪತ್ರಗಳಿಲ್ಲದೆ ಇಲ್ಲದೆ ದನ ಸಾಗಾಟ ಮಾಡಿರುವುದರಿಂದ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net