

ಕುಮಟಾ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಾಲೂಕಿನ ಕಲ್ಲಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನ ಕಂದವಳ್ಳಿ ಹಾಗೂ ದೀವಳ್ಳಿಯ ಗೌಡರಕೊಪ್ಪ ಭಾಗಕ್ಕೆ ಬಸ್ ಸಂಚಾರ ಆರಂಭಿಸಲಾಗಿದೆ.
ಮೇಲಿನ ಕಂದವಳ್ಳಿ ಹಾಗೂ ದೀವಳ್ಳಿ ಭಾಗದಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸಂತೆಗುಳಿ ಶಾಲೆಗೆ ತೆರಳಲು ತೆರಳಲು ದಿನನಿತ್ಯ ನಾಲ್ಕಾರು ಕಿಮೀ ನಡೆಯುವ ಅನಿವಾರ್ಯತೆ ಇತ್ತು. ಈ ಬಗ್ಗೆ ಫೆ. 21 ರಂದು ವಿಜಯವಾಣಿಯಲ್ಲಿ ವರದಿ ಪ್ರಕಟಿಸಲಾಗಿತ್ತು.
ಗ್ರಾಮಕ್ಕೆ ಬಸ್ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪೂಜಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಕಲ್ಲಬ್ಬೆ ಪಂಚಾಯಿತಿ ಅಧ್ಯಕ್ಷ ಗಿರಿಯಾ ಟಿ. ಗೌಡ, ಗಣಪತಿ ಹೆಗಡೆ, ಮಹಾದೇವ ಟಿ. ಗೌಡ, ಶಂಕರ ಗೌಡ, ಮಂಜುನಾಥ ಗೌಡ, ಕಮಲಾಕರ ಹೆಗಡೆ, ಗಣಪತಿ ಟಿ. ಗೌಡ, ಸುಬ್ರಾಯ ಆಚಾರಿ, ಹರಿಶ್ಚಂದ್ರ ಗೌಡ, ಪ್ಯಾಸ್ಕಲ್ ಅಲ್ಮೇಡ, ಅಶೋಕ ಮುಕ್ರಿ, ಜಟ್ಟು ಗೌಡ, ತಿಮ್ಮು ಗೌಡ, ಈಶ್ವರ ಭಟ್, ಸಾಮಾಜಿಕ ಕಾರ್ಯಕರ್ತ ಭಾಸ್ಕರ ಪಟಗಾರ ಇತರರು ಇದ್ದರು.