ಸಾರಿಗೆ ನೌಕರರ ಪ್ರತಿಭಟನೆ

BLH11111
ಬೈಲಹೊಂಗಲ ಪಟ್ಟಣದಲ್ಲಿ ಶುಕ್ರವಾರ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದರು. ನೌಕರ ಬಸವರಾಜ್ ಹಳ್ಳೂರ, ಮಹಾಂತೇಶ ಹಿರೇಮಠ, ಬಸವರಾಜ ಖಾನಗೌಡ, ಬಾಳಪ್ಪ ಚಳಕೊಪ್ಪ, ಮಹಾಂತೇಶ ಹಿರೇಮಠ, ಈಶ್ವರ ಶಿಲ್ಲೇದಾರ ಇತರರು ಇದ್ದರು.
Published on

ಬೈಲಹೊಂಗಲ: ರಾಜ್ಯಾದ್ಯಂತ ನಡೆದ ಸಾರಿಗೆ ನೌಕರರ ಮುಷ್ಕರಕ್ಕೆ ಬೈಲಹೊಂಗಲ ಸಾರಿಗೆ ನೌಕರರು ಬೆಂಬಲ ನೀಡಿ, ಕರ್ತವ್ಯಕ್ಕೆ ಹಾಜರಾಗದೆ ಸಾರಿಗೆ ಘಟಕದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಬಸ್ ಸಂಚಾರ ಇಲ್ಲದೆ ಬೇರೆ ಊರುಗಳಿಗೆ ತೆರಳಲು ಪ್ರಯಾಣಿಕರು ಪರದಾಡುವಂತಾಯಿತು.

ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಸವಲತ್ತು ನೀಡಬೇಕು. ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು. ನೌಕರ ಬಸವರಾಜ್ ಹಳ್ಳೂರ ಮಾತನಾಡಿ, ಯಾವುದೇ ಸಂಘಟನೆಗಳ ಬೆಂಬಲವಿಲ್ಲದೆ ಸ್ವಇಚ್ಛೆಯಿಂದಲೇ ಹೋರಾಟ ನಡೆಸುತ್ತಿದ್ದೇವೆ. ನಮಗೆ ಸರ್ಕಾರ ಮಾಡುತ್ತಿರುವ ಮಲತಾಯಿ ಧೋರಣೆ ನಿಲ್ಲಿಸಿ, ನಮಗೆ ಸರ್ಕಾರಿ ನೌಕರರೆಂದು ಪರಿಗಣಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ, ಉಪ ಮುಖ್ಯಮಂತ್ರಿ ಲಕ್ಷ್ಮ್ಮಣ ಸವದಿ ಅವರು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ, ಬೇಡಿಕೆ ಈಡೇರುವರೆಗೆ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮುಖಂಡರಾದ ಬಸವರಾಜ ಖಾನಗೌಡ, ಬಾಳಪ್ಪ ಚಳಕೊಪ್ಪ, ರೈತ ಸಂಘದ ತಾಲೂಕು ಅಧ್ಯಕ್ಷ ಮಹಾಂತೇಶ ಹಿರೇಮಠ, ಕಾರ್ಯದರ್ಶಿ ಈಶ್ವರ್ ಶಿಲ್ಲೇದಾರ ಬೆಂಬಲ ನೀಡಿದರು. ಸಾರಿಗೆ ನೌಕರರಾದ ಬಸವರಾಜ ಮೆಳವಂಕಿ, ಅನಿಲ ಕಲಾಲ, ಶಿವಾನಂದ ಆಯಟ್ಟಿ, ರಮೇಶ್ ಗುಂಡಪ್ಪನವರ, ಯಲ್ಲಪ್ಪ ಓಂಕಾರ, ಮಲ್ಲಿಕಾರ್ಜುನ ತಲ್ಲೂರ, ಸುಭಾಷ ರುದ್ರಾಪುರ ಹಾಗೂ ಸಾರಿಗೆ ಘಟಕದ ನೂರಾರು ನೌಕರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net