ಮುಂದುವರಿದ ಸಾರಿಗೆ ನೌಕರರ ಮುಷ್ಕರ: ಹೊಸಪೇಟೆಯಲ್ಲಿ ಇಬ್ಬರು ವಜಾ, ಮೂವರು ಅಮಾನತು

Hospet KSRTC Bus Strike Passangers
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಮಹಿಳೆ ಮಕ್ಕಳೊಂದಿಗೆ ಮನೆಗೆ ಹಿಂದಿರುಗಲು ಆಟೋದತ್ತ ಸಾಗುತ್ತಿರುವುದು.
Published on

ಹೊಸಪೇಟೆ: ಕರ್ತವ್ಯಲೋಪ ಆರೋಪದಡಿ ಎನ್‌ಇಕೆಎಸ್‌ಆರ್‌ಟಿಸಿ ಹೊಸಪೇಟೆ ವಿಭಾಗದ ಇಬ್ಬರು ತರಬೇತಿ ನೌಕರರ ವಜಾ ಹಾಗೂ ಮೂವರು ಸಿಬ್ಬಂದಿಯನ್ನು ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಅಮಾನತುಗೊಳಿಸಿದ್ದಾರೆ.

ಕರ್ತವ್ಯಕ್ಕೆ ಹಾಜರಾಗುವಂತೆ 33 ಜನ ಟ್ರೈನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೂಡ್ಲಿಗಿ, ಹರಪನಹಳ್ಳಿ ಮತ್ತು ಸಂಡೂರು ವಿಭಾಗದ ವ್ಯಾಪ್ತಿಯಲ್ಲಿ ಸಾರಿಗೆ ಅಧಿಕಾರಿಗಳು ಎಷ್ಟು ಮನವೊಲಿಸಿದರೂ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ನಾನಾ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದಾರೆ.

ನಿವೃತ್ತ ನೌಕರರು ಹಾಜರು: ವಿಭಾಗದ ವ್ಯಾಪ್ತಿಯಲ್ಲಿ ನಿವೃತ್ತಿ ಹೊಂದಿದ, 62 ವರ್ಷ ಒಳಗಿನ 18 ನಿವೃತ್ತ ನೌಕರರಿಗೆ ಕೆಲಸಕ್ಕೆ ಬರುವಂತೆ ಇಲಾಖೆಯಿಂದ ಕೋರಲಾಗಿತ್ತು. ಈ ಪೈಕಿ ಶನಿವಾರ ಇಬ್ಬರು ಹಾಜರಾದರು. ನಗರ ವ್ಯಾಪ್ತಿಯಲ್ಲಿಯೇ ಕರ್ತವ್ಯ ನಿರ್ವಹಿಸುವಂತೆ ನಿಯಂತ್ರಣಾಧಿಕಾರಿ ಆದೇಶ ಪ್ರತಿ ನೀಡಿ ಕರ್ತವ್ಯಕ್ಕೆ ಕಳುಹಿಸಿದರು.

75 ಬಸ್‌ಗಳ ಸಂಚಾರ: ಹೊಸಪೇಟೆ 20, ಕೂಡ್ಲಿಗಿ 12, ಹಡಗಲಿ 17, ಸಂಡೂರು 11, ಎಚ್.ಬಿ.ಹಳ್ಳಿ 8, ಹರಪನಹಳ್ಳಿ ಡಿಪೋದಿಂದ 7 ಬಸ್‌ಗಳು ಶನಿವಾರ ಸಂಚರಿಸಿದವು ಎಂದು ನಿಯಂತ್ರಣಾಧಿಕಾರಿ ಶೀನಯ್ಯ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net