ಸಾರಿಗೆ ಸಂಸ್ಥೆ ಚಾಲಕನಿಗೆ ಆರು ತಿಂಗಳು ಸಜೆ

Bus
Published on

ನರಗುಂದ: ನಿರ್ಲಕ್ಷೃದಿಂದ ಬಸ್ ಚಾಲನೆ ಮಾಡಿದ ಸಾರಿಗೆ ಸಂಸ್ಥೆಯ ಚಾಲಕನಿಗೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಆರು ತಿಂಗಳು ಜೈಲು, 5 ಸಾವಿರ ರೂಪಾಯಿ ದಂಡ ವಿಧಿಸಿದೆ. ಹುಬ್ಬಳ್ಳಿ ಗ್ರಾಮಾಂತರ ಘಟಕದ ಚಾಲಕ ಜಗದೀಶ ಲಿಂಗರಾಜ ಭಜಂತ್ರಿ ಶಿಕ್ಷೆಗೆ ಗುರಿಯಾದವ.

ಏನಿದು ಘಟನೆ: 2018ರಲ್ಲಿ ನರಗುಂದದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಜಗದೀಶ ಭಜಂತ್ರಿ ಪಟ್ಟಣದ ಹುಬ್ಬಳ್ಳಿ- ಸೊಲ್ಲಾಪುರ ಹೆದ್ದಾರಿ ಪಕ್ಕದ ಮೆಹಬೂಬಸುಭಾನಿ ದರ್ಗಾ ಹತ್ತಿರ ಬಸ್ ನಿಷ್ಕಾಳಜಿಯಿಂದ ಚಲಾಯಿಸಿ, ಹುಬ್ಬಳ್ಳಿಯಿಂದ ನರಗುಂದದತ್ತ ಬರುತ್ತಿದ್ದ ಮತ್ತೊಂದು ಬಸ್‌ಗೆ ಡಿಕ್ಕಿ ಹೊಡೆಸಿದ್ದ. ಈ ವೇಳೆ ಎದುರಿನ ಬಸ್‌ನಲ್ಲಿದ್ದ ಡ್ರೈವರ್, ಕಂಡಕ್ಟರ್ ಸೇರಿದಂತೆ 25 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರು. ನವಲಗುಂದ ತಾಲೂಕು ಕಾಲವಾಡದ ಶಿವರಡ್ಡಿ ನಿಂಗರಡ್ಡಿ ಎಂಬುವವರು ಪ್ರಕರಣ ದಾಖಲಿಸಿದ್ದರು. ಅಂದಿನ ಪಿಎಸ್‌ಐ ಎಚ್.ಬಿ. ತಳವಾರ ಕೇಸ್ ದಾಖಲಿಸಿಕೊಂಡು, ಎಎಸ್‌ಐ ಎನ್.ಎಸ್. ಹೆಬಸೂರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜೆಎಂಎಫ್‌ಸಿ ನ್ಯಾಯಾಧೀಶ ಜಿನ್ನಪ್ಪ ಚೌಗಲಾ ಈ ಆದೇಶ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net