ಬಸ್ಸಿಗೆ ಹಿಂಬದಿಯಿಂದ ಬಂದು ಡಿಕ್ಕಿ, ಗಾಯಾಳುವನ್ನು ಆಸ್ಪತ್ರೆಗೆ ಬಸ್ಸಿನಲ್ಲಿ ಸಾಗಿಸಿದ ಸಾರಿಗೆ ಸಂಸ್ಥೆ ಸಿಬ್ಬಂದಿ

2-1.jpg
Published on

ಚಿಕ್ಕಬಳ್ಳಾಪುರ:ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ ಬಳಿ ಅತಿವೇಗವಾಗಿ  ಬೈಕ್‌ನಲ್ಲಿ ಬಂದು ಬಸ್ಸಿಗೆ ಡಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡಿದ್ದು ಸಾರಿಗೆ ಸಂಸ್ಥೆಯ ಸಿಬ್ಬಂದಿಯೇ ಬಸ್ಸಿನಲ್ಲಿ ಗಾಯಾಳುವನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರ ಬೆಂಗಳೂರಿನ ಕಾಡುಗೋಡಿಯ ಕೃಷ್ಣ (41). ಚಿಂತಾಮಣಿ-ಸಿಗಂಧೂರು ಮಾರ್ಗದ ಸಾರಿಗೆ ಸಂಸ್ಥೆ ಬಸ್ ಬೆಂಗಳೂರಿನಿಂದ ಚಿಂತಾಮಣಿಗೆ ಬರುತ್ತಿದ್ದಾಗ ಬೈಕ್ ಸವಾರ ಬಸ್ ಹಿಂಬದಿಯಲ್ಲಿ ಬಂದು ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಉಂಟಾದ ಶಬ್ದ ಕೇಳಿ ಚಾಲಕ ಬಸ್‌ನ್ನು ನಿಲ್ಲಿಸಿದ್ದು ತಕ್ಷಣ ನಿರ್ವಾಹಕ ಹಿಂಬದಿಗೆ ಹೋಗಿ ನೋಡಿದಾಗ ಬೈಕ್ ಸವಾರ ಡಿಕ್ಕಿ ಹೊಡೆದಿ ಕೆಳಕ್ಕೆ ಬಿದ್ದಿರುವುದು ಗೊತ್ತಾಗಿದೆ. ಆಂಬುಲೆನ್ಸ್ ಗೆ ಕರೆ ಮಾಡಿದ್ದರೂ ಬೇಗ ಬಂದಿಲ್ಲ. ಕೊನೆಗೆ ಬಸ್ ಚಾಲಕ ಮತ್ತು ನಿರ್ವಾಹಕ ಬಸ್‌ನಲ್ಲಿ ಗಾಯಾಳುವನ್ನು ಕರೆದುಕೊಂಡು ಬಂದು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net