ಸಾರಿಗೆ ಸಂಸ್ಥೆ ಬಸ್ ಬ್ರೇಕ್ ಫೇಲ್; ತಪ್ಪಿದ ಅನಾಹುತ

20-04-Shiva-3
ರಾಯಚೂರಿನ ಅಂಬೇಡ್ಕರ್ ವೃತ್ತದ ಬಳಿ ಬ್ರೇಕ್ ಫೇಲ್ ಆದ ಸಾರಿಗೆ ಸಂಸ್ಥೆ ಬಸ್ ಶನಿವಾರ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿರುವುದು.
Published on

ರಾಯಚೂರು: ನಗರದ ಅಂಬೇಡ್ಕರ್ ವೃತ್ತದಲ್ಲಿ ಸಾರಿಗೆ ಸಂಸ್ಥೆಯ ಬಸ್‌ನ ಬ್ರೇಕ್ ಫೇಲ್ ಆಗಿ ಶನಿವಾರ ಎರಡು ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಸವಾರರು ಅಪಾಯದಿಂದ ಪಾರಾಗಿದ್ದಾರೆ. ದ್ವಿಚಕ್ರ ವಾಹನ ಚಕ್ರಗಳ ಕೆಳಗೆ ಸಿಲುಕಿದ್ದರಿಂದ ಬಸ್ ನಿಂತಿದ್ದು, ಹೆಚ್ಚಿನ ಅನಾಹುತ ತಪ್ಪಿದೆ.
ರಾಯಚೂರಿನಿಂದ ತಲಮಾರಿಗೆ ಹೋಗುತ್ತಿದ್ದ ಬಸ್ ಬಸ್ ನಿಲ್ದಾಣದಿಂದ ಹೊರಬಂದು ಅಂಬೇಡ್ಕರ್ ವೃತ್ತಕ್ಕೆ ಬರುವಾಗ ಮುಂದೆ ಹೋಗುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ವಾಹನ ಸವಾರರು ಬಸ್ ಪಕ್ಕದಲ್ಲಿ ಬಿದ್ದಿದ್ದು, ಎರಡು ದ್ವಿಚಕ್ರ ವಾಹನಗಳು ಸಂಪೂರ್ಣ ಹಾನಿಗೊಳಗಾಗಿವೆ.
ಪ್ರಯಾಣಿಕರ ದಟ್ಟನೆ ಹೆಚ್ಚಾಗಿರುವುದರಿಂದ ಬಸ್‌ಗಳ ನಿರ್ವಹಣೆ ಮಾಡದೆ ರಸ್ತೆ ಇಳಿಸುತ್ತಿರುವುದರಿಂದ ಇಂತಹ ಘಟನೆಗಳು ಜರುಗಿತ್ತಿವೆ. ಜತೆಗೆ ಸಾರಿಗೆ ಸಂಸ್ಥೆ ಬಸ್‌ಗಳು ಮಾರ್ಗ ಮಧ್ಯದಲ್ಲಿ ಕೆಟ್ಟು ನಿಲ್ಲುವುದು ಹೆಚ್ಚುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net