ಪಾರದರ್ಶಕವಾಗಿ ಮನೆಗಳ ಹಂಚಿಕೆ, ಬಳ್ಳಾರಿ ಪಾಲಿಕೆ ಆಯುಕ್ತೆ ತುಷಾರಮಣಿ ಹೇಳಿಕೆ

190220 Ballari Mundaragi Badavani Home Selection
Published on

ಬಳ್ಳಾರಿ: ನಗರದ ಮುಂಡ್ರಿಗಿ ಬಡಾವಣೆಯ ಆಶ್ರಯ ಯೋಜನೆ ಫಲಾನುಭವಿಗಳಿಗೆ ಲಾಟರಿ ಮೂಲಕ ಪಾರದರ್ಶಕವಾಗಿ ಮನೆಗಳ ಹಂಚಿಕೆ ಮಾಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ತಿಳಿಸಿದರು.

ನಗರದ ಬಿಡಿಎಎ ಸಭಾಂಗಣದಲ್ಲಿ ಮಂಗಳವಾರ ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆಗಳ ಹಂಚಿಕೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಮನೆ ಸಂಖ್ಯೆ ಪಡೆದ ಫಲಾನುಭವಿಗಳು ಮುಂಡ್ರಿಗಿ ಬಡಾವಣೆಗೆ ಭೇಟಿ ನೀಡಿ ತಮ್ಮ ಮನೆಗಳ ನಿರ್ಮಾಣ ಕಾರ್ಯ ಪರಿಶೀಲಿಸಬಹುದು. ವಂತಿಕೆ ಹಣ ಪಾವತಿ ಬಗ್ಗೆ ಬ್ಯಾಂಕ್‌ನಿಂದ ನೋಟಿಸ್ ನೀಡಲಾಗಿದೆ. ನೋಟಿಸ್ ತಲುಪದ ಫಲಾನುಭವಿಗಳು ಜಿಲ್ಲಾಸ್ಪತ್ರೆ ಎದುರು ಇರುವ ಯೋಜನೆಯ ಕಚೇರಿಗೆ ಭೇಟಿ ನೀಡಿ ನೋಟಿಸ್ ಪಡೆದುಕೊಳ್ಳಬೇಕೆಂದು ಸೂಚಿಸಿದರು.

ಬೆರಳಣಿಕೆಯ ಫಲಾನುಭವಿಗಳು 50 ಸಾವಿರ ರೂ. ವಂತಿಕೆ ಹಣ ಪಾವತಿಸಿದ್ದಾರೆ. ಕೆಲವರು 10 ಸಾವಿರ ರೂ. ಮಾತ್ರ ಪಾವತಿಸಿದ್ದಾರೆ. ಕೆಲ ಫಲಾನುಭವಿಗಳು ವಂತಿಕೆ ಮೊತ್ತವನ್ನು ಬ್ಯಾಂಕ್ ಸಾಲದೊಂದಿಗೆ ಸೇರಿಸುವಂತೆ ಕೋರಿದ್ದಾರೆ. ಈ ಕುರಿತು ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಆಯುಕ್ತೆ ತುಷಾರಮಣಿ ತಿಳಿಸಿದರು. 2123 ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆಗಳ ಸಂಖ್ಯೆ ಆಯ್ಕೆ ಮಾಡಿ ಮಾಹಿತಿ ನೀಡಲಾಯಿತು. ಪಾಲಿಕೆಯ ಆಶ್ರಯ ಯೋಜನಾಧಿಕಾರಿ ದೇವರಾಜ, ಎಇಇ ಅಭಿಷೇಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net