ಕ್ಷತ್ರಿಯ ಸಮಾಜದ ಪರಿವರ್ತನೆ ಅಗತ್ಯ

Transformation of Kshatriya society is necessary
ಬಾಗಲಕೋಟೆ ನಗರದ ಜೀವೇಶ್ವರ ದೇವಾಲಯದ ಮಂಗಳ ಭವನದಲ್ಲಿ ಎಸ್‌ಎಸ್‌ಕೆ ಸಮಾಜ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ದಂಪತಿಯನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಕೆ ಸಮಾಜದ ಗುಳೇದಗುಡ್ಡ ತಾಲೂಕು ಘಟಕದ ಅಧ್ಯಕ್ಷ ಪರಶುರಾಮ ಪವಾರ, ಜಿಲ್ಲಾಧ್ಯಕ್ಷ ಗಣಪತಸಾ ದಾನಿ, ಮಹಿಳಾ ಮಂಡಳ ಅಧ್ಯಕ್ಷೆ ಸ್ಮೀತಾ ಪಾಟೀಲ, ಕಾನಿಪ ಸಂಘದ ಜಿಲ್ಲಾಧ್ಯಕ್ಷ ಆನಂದ ಧಲಬಂಜನ ಇತರರು ಇದ್ದರು.
Published on

ಬಾಗಲಕೋಟೆ: ಕ್ಷತ್ರಿಯ ಸಮಾಜ ಹಿಂದುಳಿದ ಸಮಾಜವಾಗಿದ್ದು, ಪರಿವರ್ತನೆ ಆಗುವುದು ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ನವನಗರದ ಜೀವೇಶ್ವರ ದೇವಾಲಯದ ಮಂಗಳ ಭವನದಲ್ಲಿ ಎಸ್‌ಎಸ್‌ಕೆ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕ್ಷತ್ರಿಯ ಸಮಾಜದವರು ಶೈಕ್ಷಣಿಕವಾಗಿ ಮುಂದುವರಿಯಬೇಕು. ಇದರಿಂದ ಎಲ್ಲ ರಂಗದಲ್ಲಿಯೂ ಸಾಧಿಸಲು ಸಾಧ್ಯವಿದೆ. ಮಕ್ಕಳಿಗೆ ಸ್ವಂತ ಉದ್ಯೋಗ ಜತೆಗೆ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದರು.

ದೇವಿ ಆಶೀರ್ವಾದ ಹಾಗೂ ನಿಮ್ಮೆಲ್ಲರ ಸಹಕಾರದಿಂದ ರಾಜ್ಯಸಭಾ ಸದಸ್ಯನಾಗುವ ಅವಕಾಶ ಸಿಕ್ಕಿತು. ಕ್ಷತ್ರಿಯ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕ್ಷತ್ರಿಯ ಸಮುದಾಯ ಎಲ್ಲ ಸಮಾಜಗಳೊಡನೆ ಉತ್ತಮ ಬಾಂಧವ್ಯ ಹೊಂದಿದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇದ್ದು, ತಮ್ಮ ಕೆಲಸ ಕಾರ್ಯದಲ್ಲಿ ಮಗ್ನರಾಗುತ್ತಾರೆ. ವರದಕ್ಷಿಣೆ ಇಲ್ಲದೆ ಮದುವೆ ಆಗುವ ಸಮಾಜ ಅಂದರೆ ಎಸ್‌ಎಸ್‌ಕೆ ಸಮಾಜ ಎಂಬುದು ಹೆಮ್ಮೆಯ ಸಂಗತಿ ಎಂದರು.

ಎಸ್‌ಎಸ್‌ಕೆ ಸಮಾಜದ ಗುಳೇದಗುಡ್ಡ ತಾಲೂಕು ಘಟಕದ ಅಧ್ಯಕ್ಷ ಪರಶುರಾಮ ಪವಾರ ಮಾತನಾಡಿ, ಎಸ್‌ಎಸ್‌ಕೆ ಸಮಾಜದ ವ್ಯಕ್ತಿಗೆ ರಾಜ್ಯಸಭಾ ಸದಸ್ಯರಾಗುವ ಯೋಗಸಿಕ್ಕಿರುವುದು ದೇವಿ ಜಗದಂಬಾ ಆಶೀವಾರ್ದವಾಗಿದೆ. ಪ್ರಧಾನ ಮಂತ್ರಿ ಮೋದಿ, ಅಮಿತ್ ಷಾ ಹಾಗೂ ಇತರ ಮುಖಂಡರು ನಮ್ಮಂತಹ ಸಣ್ಣ ಸಮಾಜವನ್ನು ಗುರುತಿಸಿರುವುದಕ್ಕೆ ಅವರಿಗೆ ಅಭಿನಂದನೆ ಹೇಳಿದರು.

ಎಸ್‌ಎಸ್‌ಕೆ ಸಮಾಜದ ಜಿಲ್ಲಾಧ್ಯಕ್ಷ ಗಣಪತಸಾ ದಾನಿ, ಮಹಿಳಾ ಮಂಡಳ ಅಧ್ಯಕ್ಷೆ ಸ್ಮೀತಾ ಪಾಟೀಲ, ಕಾನಿಪ ಸಂಘದ ಜಿಲ್ಲಾಧ್ಯಕ್ಷ ಆನಂದ ಧಲಬಂಜನ, ಮುಖಂಡರಾದ ಸಿದ್ದರಾಮಸಾ ದಾನಿ, ಎಂ.ಎಂ ಪಾಟೀಲ, ಶರತ್ ಕಲಬುರ್ಗಿ, ಪರಶರಾಮ ಧಲಬಂಜನ, ನಾಗೇಂದ್ರಸಾ ಮಲಜಿ, ಶ್ರೀಕಾಂತ ಮೈತ್ರಾಣಿ ಇತರ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net