ಜನಾಕ್ರೋಶ ಆಂದೋಲನವಾಗಿ ಪರಿವರ್ತನೆ

Transformation into a public outcry movement
ಆಲಮಟ್ಟಿ ಸಮೀಪದ ಯಲಗೂರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿದರು. ಚನ್ನಬಸು ಚನ್ನಿಂಗಾಳ, ಮಹಾಂತೇಶ ಪಟ್ಟಣದ, ಶಂಕ್ರಗೌಡ ಶಿವಣಗಿ ಇತರರಿದ್ದರು.
Published on

ಆಲಮಟ್ಟಿ: ವಿಜಯಪುರ ನಗರದಲ್ಲಿ ಏ.17 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ನಡೆಯಲಿದ್ದು, ಯಾತ್ರೆಯು ಆಂದೋಲನವಾಗಿ ಪರಿವರ್ತನೆಯಾಗಲಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಸಮೀಪದ ಯಲಗೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.7ರಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಆರಂಭವಾದ ಜನಾಕ್ರೋಶ ಯಾತ್ರೆ ಮೊದಲ ಹಂತದಲ್ಲಿ ಮುಕ್ತಾಯಗೊಂಡಿದೆ. 2ನೇ ಹಂತದ ಯಾತ್ರೆ ಏ.16ರಂದು ಬೆಳಗಾವಿಯಿಂದ ಆರಂಭಗೊಳ್ಳಲಿದೆ. ಏ. 17ರಂದು ಮಧ್ಯಾಹ್ನ 4ಕ್ಕೆ ವಿಜಯಪುರದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ 2 ರೂ. ಹೆಚ್ಚಳವನ್ನು ತೈಲ ಕಂಪನಿಗಳಿಗೆ ಹೇರಿದೆ. ಆದರೆ, ರಾಜ್ಯ ಸರ್ಕಾರ ಬೆಲೆ ಹೆಚ್ಚಳ ಮಾಡಿದ್ದು ನೇರವಾಗಿ ಗ್ರಾಹಕರಿಗೆ ಹೊರೆಯಾಗುತ್ತಿದೆ. 2023ರಲ್ಲಿ ಗ್ಯಾಸ್ ಬೆಲೆಯಲ್ಲಿ 300 ರೂ. ಕಡಿಮೆ ಮಾಡಿದರು. ಸದ್ಯ ಕೇವಲ 50 ರೂ. ಹೆಚ್ಚು ಮಾಡಲಾಗಿದೆ ಎಂದರು.

ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ಕಾಂಗ್ರೆಸ್ ಹೈಕಮಾಂಡ್ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಬ್ಲಾೃಕ್‌ಮೇಲ್ ಮಾಡುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಮತ್ತು ತಂಡದವರು ಜಾತಿ ಗಣತಿ ಅಸ್ತ್ರ ಬಳಸುತ್ತಿದ್ದಾರೆ. ಇಷ್ಟು ದಿನ ನೆನಪಾಗದ ಜಾತಿ ಗಣತಿ ಈಗೇಕೆ ನೆನಪಾಗುತ್ತಿದೆ ಎಂದು ಪ್ರಶ್ನಿಸಿದರು.

ಯುಕೆಪಿ ಯೋಜನೆಯಡಿ ಸಂತ್ರಸ್ತ ರೈತರು ತಮ್ಮ ಭೂಮಿಗೆ ನ್ಯಾಯಯುತ ಪರಿಹಾರ ಸಿಗದಿದ್ದಾಗ ನ್ಯಾಯಾಲಯದಲ್ಲಿ ಮೊರೆ ಹೋಗುವುದು ಅನಿವಾರ್ಯ. ನ್ಯಾಯಾಲಯದ ಆದೇಶದಂತೆ ಸರ್ಕಾರ ಪರಿಹಾರ ನೀಡಬೇಕು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ತಮ್ಮ ಮನೆಯಿಂದ ಕೊಡುತ್ತಾರಾ? ನೀವು ನಿಮ್ಮ ವೋಟ್‌ಗಾಗಿ ಸರ್ಕಾರದ ಖಜಾನೆಯನ್ನು ಬೇಕಾಬಿಟ್ಟಿಯಾಗಿ ಪುಗ್ಸಟ್ಟೆ ದಾನ ಮಾಡಲು ಬರುತ್ತದೆ. ಶಾಶ್ವತವಾಗಿ ಭೂಮಿ ಕಳೆದುಕೊಂಡ ರೈತರಿಗೆ ಯೋಗ್ಯ ಪರಿಹಾರ ಕೊಡಲು ಬರುವುದಿಲ್ಲವೇ ಎಂದು ಪ್ರಶ್ನಿಸಿದರು.

ಚನ್ನಬಸು ಚನ್ನಿಂಗಾಳ, ಮಹಾಂತೇಶ ಪಟ್ಟಣದ, ಶಂಕ್ರಗೌಡ ಶಿವಣಗಿ ಹಾಗೂ ಯರಝರಿ ಜಿಪಂ ಮತಕ್ಷೇತ್ರದ ಎಲ್ಲ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net