

ಅಳವಂಡಿ: ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಪಾಲಕರು ಮಕ್ಕಳ ಮೇಲೆ ನಿಗವಹಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ ರಾವ್ ಹೇಳಿದರು.
ಇದನ್ನೂ ಓದಿ:ಮೀಯಪದವು ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ
ಸಮೀಪದ ಹಿರೇ ಸಿಂದೋಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಗಳಲ್ಲಿ ಶಿಕ್ಷಕರು ದುಶ್ಚಟಕ್ಕೆ ಬಲಿಯಾಗುತ್ತಿರುವ ಮಕ್ಕಳನ್ನು ಗುರುತಿಸಿ ವಿಶೇಷ ಬೋಧನೆ ಹಾಗೂ ಅರಿವು ಮೂಡಿಸುವ ಮೂಲಕ ಮನ ಪರಿವರ್ತನೆ ಮಾಡಬೇಕು ಎಂದರು.
ಮುಖ್ಯಶಿಕ್ಷಕ ಎಸ್.ಬಿ.ಕುರಿ, ಸಂಪನ್ಮೂಲ ವ್ಯಕ್ತಿ ಈಶ್ವರ ಪೂಜಾರ, ಶಿಕ್ಷಕರಾದ ಶೋಭಾ, ಬಸವರಾಜ, ಮರಿಸ್ವಾಮಿ, ವಲಯ ಮೇಲ್ವಿಚಾರಕಿ ರುಕ್ಮಿಣಿ, ಪ್ರಮುಖರಾದ ಶರಣಮ್ಮ, ಕವಿತಾ ಇತರರಿದ್ದರು.