ಶ್ರೀಗಂಧ ವಸ್ತುಸಂಗ್ರಹಾಲಯ ಮೃಗಾಲಯಕ್ಕೆ ಸ್ಥಳಾಂತರ

mysore
Published on

ಮೈಸೂರು: ಮೈಸೂರು ಅರಣ್ಯ ಭವನದ ಶ್ರೀಗಂಧದ ಕೋಟೆಯಲ್ಲಿರುವ ಶ್ರೀಗಂಧ ವಸ್ತುಸಂಗ್ರಹಾಲಯವನ್ನು ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ಸ್ಥಳಾಂತರಿಸಲು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅನುಮತಿ ನೀಡಿದ್ದಾರೆ.


ಕೂರ್ಗಳ್ಳಿಯ ಚಾಮುಂಡಿ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಈ ವಸ್ತುಸಂಗ್ರಹಾಲಯವನ್ನು ಚಾಮರಾಜೇಂದ್ರ ಮೃಗಾಲಯಕ್ಕೆ ಸ್ಥಳಾಂತರಿಸಿದರೆ, ಪ್ರವಾಸಿಗರಿಗೆ ಶ್ರೀಗಂಧದ ಹಿರಿಮೆಯನ್ನು ತಿಳಿಯಲು ಅನುಕೂಲವಾಗುತ್ತದೆ. ಇದರಿಂದ ಮೈಸೂರಿನ ಖ್ಯಾತಿಯೂ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.


ಇದೇ ವೇಳೆ ಪುನರ್ವಸತಿ ಕೇಂದ್ರದಲ್ಲಿ ನಿರ್ಮಿಸಿರುವ ವನ್ಯಜೀವಿಗಳ ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಆಸ್ಪತ್ರೆ ಉದ್ಘಾಟಿಸಿದ ಸಚಿವರು, ಅಲ್ಲಿರುವ ವೈದ್ಯಕೀಯ ಸಲಕರಣೆ, ಸೌಲಭ್ಯ ವೀಕ್ಷಿಸಿದರು.


ಆವರಣದಲ್ಲಿ ಆನೆಗಳಿಗಾಗಿಯೇ ನಿರ್ಮಿಸಲಾಗಿರುವ ಈಜುಕೊಳದಲ್ಲಿ ಸ್ವಚ್ಛಂದವಾಗಿ ಈಜಾಡುತ್ತಿದ್ದ ಆನೆಗಳು, ಗಾಯಗೊಂಡ ಹುಲಿ, ಚಿರತೆಗಳನ್ನು ಇಡಲಾಗಿರುವ ಆವರಣಕ್ಕೂ ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net