

ಚಿಕ್ಕಮಗಳೂರು: ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಧೀಶರಿಗೆ ವರ್ಗಾವಣೆ ಸಹಜ ಪ್ರಕ್ರಿಯೆ. ಈ ನಡುವೆ ನಾವು ನೀಡಿದ ನ್ಯಾಯಸಮ್ಮತ ತೀರ್ಪುಗಳು ವೃತ್ತಿ ಬದುಕಿನಲ್ಲಿ ಸಾಕಷ್ಟು ಪ್ರಭಾವ ಬೀರುತ್ತವೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಶಾಂತಣ್ಣ ಮುತ್ತಪ್ಪ ಆಳ್ವ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ನ್ಯಾಯಾಧೀಶರಾದ ಶಾಂತಣ್ಣ ಮುತ್ತಪ್ಪ ಆಳ್ವ, ಆರ್.ಪಿ.ನಂದೀಶ್, ಎ.ಎಸ್.ಸೋಮ, ಎ.ಕಾಜಲ್ ಹಾಗೂ ಬಿ.ಪುಷ್ಪಾಂಜಲಿ ಅವರಿಗೆ ಜಿಲ್ಲಾ ವಕೀಲರ ಸಂಘ ನೀಡಿದ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅವರು, ಓರ್ವ ಉತ್ತಮ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಲು ವಕೀಲರ ಸಹಕಾರ ಅತ್ಯಮೂಲ್ಯ. ಪ್ರತಿ ಕೇಸುಗಳಲ್ಲಿ ವಕೀಲರು ಸಾಕ್ಷಿ, ದಾಖಲೆಗಳನ್ನು ಸಮರ್ಪಕವಾಗಿ ಒದಗಿಸಿದರೆ ನ್ಯಾಯಯುತ ತೀರ್ಮಾನ ಕೈಗೊಳ್ಳಲು ಸಾಧ್ಯ. ಮೂರು ವರ್ಷಗಳು ಜಿಲ್ಲೆಯಲ್ಲಿ ಕೈಗೊಂಡ ಸೇವೆ ಆತ್ಮತೃಪ್ತಿ ತಂದಿದೆ ಎಂದು ಹೇಳಿದರು.
ಆರೋಗ್ಯ ಹದಗೆಟ್ಟರೆ ಆಸ್ಪತ್ರೆಗೆ ತೆರಳುವಾಗ ರೀತಿ ಅನ್ಯಾಯ, ಅಕ್ರಮ ಅಥವಾ ಇನ್ಯಾವುದೇ ಸಮಾಜದಲ್ಲಿ ವಂಚನೆಗೆ ಒಳಗಾಗಿದ್ದಲ್ಲಿ ಸಾರ್ವಜನಿಕರು ಮುಕ್ತವಾಗಿ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ನ್ಯಾಯಕ್ಕಾಗಿ ಹೋರಾಡಬೇಕು. ನೊಂದವರ ಪಾಲಿಗೆ ನ್ಯಾಯಾಲಯ ಸಮರ್ಪಕ ವಿಚಾರಣೆ ನಡೆಸಿ ಸೂಕ್ತ ತೀರ್ಪು ನೀಡುತ್ತದೆ ಎಂದು ಹೇಳಿದರು.
ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿಹೊಂದಿ ವರ್ಗಾವಣೆಗೊಂಡ ಆರ್.ಪಿ.ನಂದೀಶ್ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರ್ವಹಿಸಿದ ಪ್ರತಿ ಕೇಸುಗಳಲ್ಲಿ ವಾದವನ್ನು ತಾಳ್ಮೆಯಿಂದ ಆಲಿಸಿ ನೊಂದ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡಿz್ದೆÃನೆ. ಜೊತೆಗೆ ವಕೀಲ ಮಿತ್ರರ ಬಾಂಧವ್ಯದಿAದ ನ್ಯಾಯಾಲಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ಅನೇಕ ವರ್ಷಗಳಿಂದ ಪರಿಪೂರ್ಣ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರತಿ ಪ್ರಕರಣಗಳಲ್ಲಿ ಅಂಜಿಕೆ ಇಲ್ಲದೇ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಿದ್ದಾರೆ. ಅಲ್ಲದೇ ಕೆಲವು ಪ್ರಕರಣಗಳಲ್ಲಿ ಎಂತಹ ಒತ್ತಡಗಳಿಗೂ ಮಣಿಯದೇ ನೊಂದವರ ಪಾಲಿಗೆ ಆಶಾದಾಯಕವಾಗಿ ಕರ್ತವ್ಯ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಸAಸಾರದಲ್ಲಿ ಗಂಡ-ಹೆAಡತಿ ಸಹಬಾಳೆÉ್ವಯಿಂದ ಜೀವನ ಸುಂದರಗೊಳಿಸಿದAತೆ, ನ್ಯಾಯಾಲಯದಲ್ಲಿ ನ್ಯಾಯಾಧೀಶರು ಹಾಗೂ ವಕೀಲರು ಹೊಂದಾಣಿಕೆಯಿAದ ಕಾರ್ಯನಿರ್ವಹಿಸಿದಾಗ ತ್ವರಿತಗತಿಯಲ್ಲಿ ಇತ್ಯರ್ಥವಾಗುವುದರಲ್ಲಿ ಸಂಶಯವಿಲ್ಲ. ಹೀಗಾಗಿ ವರ್ಗಾವಣೆಗೊಂಡ ನ್ಯಾಯಾಧೀಶರು ಕಹಿ ಘಟನೆಗಳನ್ನು ಮರೆತು ವಕೀಲರು, ಸಹಪಾಠಿಗಳ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ ಮುನ್ನೆಡೆಯಬೇಕು ಎಂದರು.
ಇದೇ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್.ಸೋಮ, ಎರಡನೇ ಹೆಚ್ಚುವರಿ ನ್ಯಾಯಾಧೀಶೆ ಎ.ಕಾಜಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಶುಭ ಗೌಡರ್, ವಕೀಲರ ಸಂಘದ ಕಾರ್ಯದರ್ಶಿ ಆರ್.ಅನಿಲ್‌ಕುಮಾರ್, ಖಜಾಂಚಿ ಡಿ.ಬಿ. ದೀಪಕ್, ಮಾಜಿ ಅಧ್ಯಕ್ಷ ಸುಧಾಕರ್, ವಕೀಲರಾದ ಕೆ.ಸಿ.ಶಿವು, ಎಚ್.ಟಿ.ನಟರಾಜ್, ರಾಘವೇಂದ್ರ, ಎ.ಎಂ.ಮಹೇಶ್, ಪಿ.ಪರಮೇಶ್, ಎಚ್.ಎಂ.ರಘುನಾಥ್, ಅಬ್ದುಲ್‌ಮಜೀದ್‌ಖಾನ್, ಮಂಜುನಾಥ್ ಮತ್ತಿತರರಿದ್ದರು.