

ಬೆಳಗಾವಿ: ಆಡಳಿತ ಸುಧಾರಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದೇ ಮಹಾನಗರ ಪಾಲಿಕೆಯಲ್ಲಿನ 46 ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ನನ್ನ ಮೇಲಿನ ಆರೋಪ ಸತ್ಯಕ್ಕ ದೂರವಾಗಿದೆ ಎಂದು ಪಾಲಿಕೆ ಆಯುಕ್ತೆ ಶುಭ ಬಿ. ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ನವೆಂಬರ್ 15ರಂದು ನಾವು ಆಂತರಿಕ ನಿಯೋಜನೆ ಮಾಡಿದ್ದೇವೆ. 46 ಸಿಬ್ಬಂದಿಯಲ್ಲಿ 26 ಜನಕ್ಕೆ ಈಗಾಗಲೇ ಕೆಲಸ ಮಾಡುವ ವಿಭಾಗದಲ್ಲೇ ಸ್ವಲ್ಪ ಹೆಚ್ಚುವರಿ ಜವಾಬ್ದಾರಿ ನೀಡಿ ನಿಯೋಜಿಸಲಾಗಿದೆ. ಉಳಿದ 20 ಸಿಬ್ಬಂದಿಯನ್ನು ಆಂತರಿಕವಾಗಿ ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ನಿಯೋಜಿಸಲಾಗಿದೆ. ಇದು ಪಾಲಿಕೆ ಆಡಳಿತ ಸುಧಾರಣೆ ದೃಷ್ಟಿಯಿಂದ ಮಾತ್ರ ಎಂದು ತಿಳಿಸಿದ್ದಾರೆ.