10 ವರ್ಷಗಳಿಂದ ಬೀಡು ಬಿಟ್ಟ ಅಧಿಕಾರಿಗಳನ್ನು ವರ್ಗಾಯಿಸಿ

memorandum
Published on

ಕಾರವಾರ:ಭಟ್ಕಳ ಕಂದಾಯ ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಅಽಕಾರಿ, ಸಿಬ್ಬಂದಿ ಒಂದೇ ಕಡೆ ಬೇರು ಬಿಟ್ಟಿದ್ದು, ಅವರನ್ನು ನಿಯಮದಂತೆ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಸೆ.20 ರಂದು ಭಟ್ಕಳ ಆಡಳಿತ ಸೌಧದ ಎದುರು ಅಹೋ ರಾತ್ರಿ ಧರಣಿ ನಡೆಸಲಾಗುವುದು ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಜಿಲ್ಲಾಧ್ಯಕ್ಷ ಶಂಕರ ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಟ್ಕಳ ತಹಸೀಲ್ದಾರ್ ಕಚೇರಿಯಲ್ಲಿರುವ 30 ಅಽಕಾರಿ, ಸಿಬ್ಬಂದಿಯಲ್ಲಿ 8 ಜನರು 10 ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ. ವರ್ಗಾವಣೆ ಎಂದರೆ ತಹಸೀಲ್ದಾರ್ ಕಚೇರಿಯಿಂದ ಎಸಿ ಕಚೇರಿಗೆ ಹೋಗುತ್ತಾರೆ. ಇದು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತಿದೆ.
ಕೆಸಿಎಸ್‌ಆರ್ ನಿಯಮಾವಳಿ 26 ರಂತೆ ಯಾವುದೇ ಅಽಕಾರಿ ಅಥವಾ ಸಿಬ್ಬಂದಿ ಒಂದೇ ಸ್ಥಳದಲ್ಲಿ 10 ವರ್ಷಕ್ಕಿಂತ ಹೆಚ್ಚು ಕಾರ್ಯ ನಿರ್ವಹಿಸುವಂತಿಲ್ಲ. ಆದರೆ, ಭಟ್ಕಳದಲ್ಲಿ ಈ ಕಾನೂನು ಬಾಹಿರ ಕಾರ್ಯ ನಡೆದ ಬಗ್ಗೆ ಭಟ್ಕಳ ಎಸಿ ಅವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಇದರಿಂದ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದರು. ವೇದಿಕೆಯ ನಾಗೇಂದ್ರ ನಾಯ್ಕ, ನಾಗೇಶ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net