ಶಿಕ್ಷಕರ ವರ್ಗಾವಣೆ: ನೂತನ ಜಿಲ್ಲೆಗೆ ವರದಾನ

986741
Published on

ಅನ್ಯ ಜಿಲ್ಲೆಯಿಂದ ವಿಜಯನಗರಕ್ಕೆ ಬಂದವರೇ ಹೆಚ್ಚು

ವೀರೇಂದ್ರ ನಾಗಲದಿನ್ನಿ ಹೊಸಪೇಟೆ
ಬರೋಬ್ಬರಿ ಒಂದೂವರೆ ದಶಕದ ಬಳಿಕ ಶಾಲಾ ಶಿಕ್ಷಣ ಇಲಾಖೆ ಕೈಗೊಂಡಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನೂತನ ವಿಜಯನಗರ ಜಿಲ್ಲೆಗೆ ವರದಾನವಾಗಿದೆ. ಜಿಲ್ಲೆಯಿಂದ ಹೊರ ಹೋದವರಿಗಿಂತ ಬಂದವರ ಸಂಖ್ಯೆಯೇ ಹೆಚ್ಚು.
ಕಲ್ಯಾಣ ಕರ್ನಾಟಕದಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಶಿಕ್ಷಕರಲ್ಲಿ ಮಧ್ಯ ಕರ್ನಾಟಕದ ದಾವಣಗೆರೆ, ಶಿವಮೊಗ್ಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳದ್ದೇ ಸಿಂಹ ಪಾಲು. ಪ್ರತೀ ಬಾರಿ ನೇಮಕಾತಿಯಲ್ಲೂ ಮಧ್ಯ ಕರ್ನಾಟಕ ಮತ್ತು ಬೆಂಗಳೂರು ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು. ನೇಮಕಗೊಂಡು ನಾಲ್ಕೆöÊದು ವರ್ಷಗಳಲ್ಲಿ ತಮ್ಮ ಸ್ವಂತ ಜಿಲ್ಲೆಗೆ
ವರ್ಗಾವಣೆಯಾಗುತ್ತಿದ್ದರು. ಪರಿಣಾಮ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಇತರೆ ಹಿಂದುಳಿದ ಜಿಲ್ಲೆ, ತಾಲೂಕುಗಳಲ್ಲೂ ಶಿಕ್ಷಕರ ಸಮಸ್ಯೆಯಾಗಿ ಶಾಲಾ ಶಿಕ್ಷಣ ಕುಂಠಿತವಾಗುತ್ತಿತ್ತು. ಹೀಗಾಗಿ ಸರ್ಕಾರ 2007ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಕರ ವರ್ಗಾವಣೆಗೆ ಹೊಸ ನೀತಿ ರೂಪಿಸಿತ್ತು. ಕಲ್ಯಾಣ ಕರ್ನಾಟಕದಲ್ಲಿ ನೇಮಕಗೊಂಡಿರುವ ಶಿಕ್ಷಕರು ತವರು ಜಿಲ್ಲೆಗೆ ಮರಳಲು ಕಳೆದ 15 ವರ್ಷಗಳಿಂದ ಕಾಯುತ್ತಿದ್ದರು. ಅವರಲ್ಲಿ ನೂರಾರು ಜನ ಶಿಕ್ಷಕರು ನೂತನ ವಿಜಯನಗರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು ಗಮನಾರ್ಹ.

ಈ ಬಾರಿ ವರ್ಗಾವಣೆಯಿಂದ ಲಭ್ಯ ಇರುವ ಶಿಕ್ಷಕರಲ್ಲಿ ಅನೇಕರು ತಮ್ಮ ಸ್ವಂತ ಜಿಲ್ಲೆಗೆ ತೆರಳುವುದರಿಂದ ಬಹುತೇಕ ಹುದ್ದೆಗಳು ಖಾಲಿಯಾಗುವ ಬಗ್ಗೆ ಇಲಾಖೆ ಅಧಿಕಾರಿಗಳಲ್ಲೂ ಆತಂಕ ಮೂಡಿಸಿತ್ತು. ಆದರೆ, ಜಿಲ್ಲೆಯ ಪ್ರಾಥಮಿಕ ಶಾಲೆಯ 379 ಶಿಕ್ಷಕರು ಅನ್ಯ ಜಿಲ್ಲೆಗೆ ವರ್ಗವಾಗಿದ್ದರೆ, 685 ಜನರು ಆಗಮಿಸಿದ್ದಾರೆ. ಪ್ರೌಢ ಶಾಲೆಯ 114 ಜನ ಶಿಕ್ಷಕರು ಅನ್ಯ ಜಿಲ್ಲೆಗೆ ಹೋಗಿದ್ದರೆ, 138 ಜನರು ಬಂದಿದ್ದಾರೆ. ಈ ಪೈಕಿ ರಾಯಚೂರು, ಬೀದರ್, ಕಲ್ಬುರ್ಗಿ, ಯಾದಗಿರಿ ಮತ್ತು ಬಳ್ಳಾರಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ವರ್ಗವಾಗಿದ್ದರಿಂದ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಇದಕ್ಕೆ ಕಾರಣವೇನು?
ಕಲ್ಯಾಣ ಕರ್ನಾಟದಿಂದ ಬೆಂಗಳೂರು, ಧಾರವಾಡ ಹಾಗೂ ಮಧ್ಯಕರ್ನಾಟಕ ಭಾಗಕ್ಕೆ ತೆರಳಲು ಸಾವಿರಾರು ಸಂಖ್ಯೆಯಲ್ಲಿ ಶಿಕ್ಷರು ಕಾಯುತ್ತಿದ್ದಾರೆ. 2007ರ ಶಿಕ್ಷಕರ ವರ್ಗಾವಣೆ ನೀತಿಯಂತೆ ನೇಮಕವಾದ ತಾಲೂಕಿನಲ್ಲಿ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿದವರು ತಾಲೂಕು ವ್ಯಾಪ್ತಿಯಲ್ಲಿ ಮತ್ತು 10 ವರ್ಷ ಸೇವೆ ಸಲ್ಲಿಸಿದವರು ಅಂತರ್ ವಿಭಾಗದಲ್ಲಿ ವರ್ಗಾವಣೆ ಪಡೆಯಬಹುದು. ಆದರೆ, ಕಲ್ಯಾಣ ಕರ್ನಾಟಕದಿಂದ ಇತರೆ ವಿಭಾಗಕ್ಕೆ ವರ್ಗ ಬಯಸುವವರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಶಿಕ್ಷಕರ ಸೇವಾ ಹಿರಿತನದ ಆಧಾರದಲ್ಲಿ ಅನೇಕರಿಗೆ ಅಂತರ್ ವಿಭಾಗದಲ್ಲಿ ವರ್ಗಾವಣೆ ಕಷ್ಟಕರ. ತಮ್ಮ ಊರಿಗೆ ಸಮೀಪವಾಗುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದ
ತಮ್ಮೂರಿನ ಪ್ರಯಾಣದ ಅವಧಿ, ವೆಚ್ಚ ಗಣನೀಯವಾಗಿ ಕಡಿಮೆಯಾಗಿಲಿದೆ.

ಅಲ್ಲದೇ, ಅಖಂಡ ಬಳ್ಳಾರಿಯಿಂದ ವಿಜಯನಗರ ಪ್ರತ್ಯೇಕಗೊಂಡಾಗ ಶಿಕ್ಷಣ ಇಲಾಖೆ ಹೊರತಾಗಿ ಇತರೆ ಇಲಾಖೆಗಳು ಜಿಲ್ಲೆಯ ಆಯ್ಕೆ ಮಾಡಿಕೊಳ್ಳಲು ಅಧಿಕಾರಿ, ಮತ್ತು ನೌಕರರಿಗೆ ಅವಕಾಶ ಕಲ್ಪಿಸಿದ್ದವು. ಹೀಗಾಗಿ ಬಳ್ಳಾರಿ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಆಗಮಿಸಿದ್ದಾರೆ. ಶಿಕ್ಷಕರ ವರ್ಗಾವಣೆಯಿಂದ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೂಡ್ಲಿಗಿ ತಾಲೂಕಿನ ಗ್ರಾಮೀಣ ಭಾಗದಲ್ಲೂ ಶಿಕ್ಷಕರ ಹುದ್ದೆಗಳು ಭರ್ತಿಯಾಗಿದ್ದು ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿರಲ್ಲಿ ಸಂತಸ ಮೂಡಿಸಿದೆ.

ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಪಾವತಿಸಿ, ಹುತಾತ್ಮ ಯೋಧನ ಸ್ಮಾರಕ ಕಡೆಗಣನೆ, ಹಂಪಿಯಲ್ಲಿ ವಾಣಿಜ್ಯ ಚಟುವಟಿಕೆ ಬಂದ್,ಸರ್ಕಾರದ ನಿಮಯದಂತೆ ಶಿಕ್ಷಕರು ವರ್ಗಾವಣೆ ಪಡೆದಿದ್ದರೂ, ನಮ್ಮ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ಶೈಕ್ಷಣಿಕ ಹಿತದೃಷ್ಟಿಯಿಂದ ಒಳ್ಳೆಯದೇ. ಅಂತರ್ ವಿಭಾಗ ಮಟ್ಟದಲ್ಲಿ ವರ್ಗಾವಣೆ ಕೋರಿ 137 ಜನ ಅರ್ಜಿ ಹಾಕಿದ್ದಾರೆ. ಅವರಲ್ಲಿ ಎಷ್ಟು ಜನರು ಹೋಗುತ್ತಾರೋ ಗೊತ್ತಿಲ್ಲ. - ಯುವರಾಜ ನಾಯ್ಕ, ಡಿಡಿಪಿಐ

ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಮಾಹಿತಿ.

ತಾಲೂಕು - ಬಂದವರು - ಹೋದವರು

ಹಡಗಲಿ 84 44
ಎಚ್‌ಬಿ ಹಳ್ಳಿ 114 54
ಹೊಸಪೇಟೆ 157 146
ಕೂಡ್ಲಿಗಿ 156 70

ಹರಪನಹಳ್ಳಿ 174 65

ಒಟ್ಟು 685 379

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net