

ಮದ್ದೂರು : ಶಾಸಕ ಮುನಿರತ್ನ, ಮಹಾನಗರ ಪಾಲಿಕೆಯ ಗುತ್ತಿಗೆದಾರ ಚಲುವರಾಜು ಮೇಲೆ ಲಂಚದ ಹಣ ನೀಡುವಂತೆ ಒತ್ತಾಯ ಮಾಡಿ, ಜಾತಿ ನಿಂದನೆ ಮಾಡಿರುವ ಪ್ರಕರಣವನ್ನು ಸಿಒಡಿ ತನಿಖೆಗೆ ಒತ್ತಾಯಿಸುವಂತೆ ರಾಜ್ಯ ಶೋಷಿತ ಸಮುದಾಯ ವೇದಿಕೆಯ ಅಧ್ಯಕ್ಷ ಕಂಠಿಸುರೇಶ್ ನೇತೃತ್ವದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮೈಸೂರಿನಿಂದ ಬೆಂಗಳೂರಿಗೆ ಹೋಗುವ ಮಾರ್ಗಮಧ್ಯೆ ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸೋಮವಾರ ಮನವಿ ಸಲ್ಲಿಸಲಾಯಿತು.
ಕಂಠಿಸುರೇಶ್ ಮಾತನಾಡಿ, ಮುನಿರತ್ನ ಮಾಜಿ ಸಚಿವರಾಗಿ, ಹಾಲಿ ಶಾಸಕನಾಗಿ ಪರಿಶಿಷ್ಟ ಜಾತಿಯ ಜನಾಂಗಗಳ ಬಗ್ಗೆ ಅವ್ಯಾಚ ಶಬ್ದಗಳಿಂದ ನಿಂದಿಸಿರುವುದು ಮತ್ತು ಒಕ್ಕಲಿಗ ಸಮುದಾಯದ ಹೆಣ್ಣು ಮಕ್ಕಳನ್ನು ಅವ್ಯಾಚ ಶಬ್ದಗಳಿಂದ ನಿಂದಿಸುವ ಮೂಲಕ ಘನಗೋರ ಅಪರಾಧ ಮಾಡಿದ್ದಾರೆ ಎಂದು ಆರೋಪಿಸಿ.
ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಮಹಿಳಾ ಅಧ್ಯಕ್ಷೆ ಉಷಾಜಯಶೀಲ, ಜಿಲ್ಲಾಧ್ಯಕ್ಷರಾದ ವೀರಭದ್ರನಾಯಕ, ಜಗದೀಶ್‌ಹರಿಶಿ, ಲಕ್ಷ್ಮಣ್ ಈರನಾಯ್ಕ, ಸವಿತಾಸುಧಾಕರ್, ಸರಸ್ವತಿ ಲಕ್ಷ್ಮಣ್ ನಾಯಕ್, ಪಲ್ಲವಿ ಇತರರು ಇದ್ದರು.