

ಕಾರವಾರ: ಹಳಿಯಾಳ ಕ್ಷೇತ್ರದ ಮುಖಂಡರು ತಮ್ಮ ಕ್ಷೇತ್ರದ ಅಧಿಕಾರಿಗಳ ವರ್ಗಾವಣೆಯಲ್ಲಿ( transfer) ಕೈ ಹಾಕುತ್ತಿದ್ದಾರೆ ಎಂದು ಎಂಸಿಎ ಅಧ್ಯಕ್ಷ, ಶಾಸಕ ಸತೀಶ ಸೈಲ್ ಸ್ವಪಕ್ಷದ ಹಿರಿಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ತಾಪಂ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ.ದೇಶಪಾಂಡೆ ಅವರ ಹೆಸರು ಹೇಳದೇ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು. ಕಾರವಾರದ ಹೆಸ್ಕಾಂ ಎಇಇ ವೀರೇಶ ಶೇಬಣ್ಣನವರ್ ಅವರನ್ನು ಹುಬ್ಬಳ್ಳಿಯ ಕಾರ್ಪೊರೇಟ್ ಕಚೇರಿಗೆ ವರ್ಗಾವಣೆ transfer) ಮಾಡಲಾಗಿತ್ತು. ಆದರೆ, ಅವರ ಸ್ಥಳಕ್ಕೆ ಬೇರೆಯವರನ್ನು ನಿಯೋಜನೆ ಮಾಡಿಲ್ಲ. ಸ್ಥಾನಕ್ಕೆ ಸೆಕ್ಷನ್ ಅಧಿಕಾರಿಯೊಬ್ಬರನ್ನು ಪ್ರಭಾರವನ್ನಾಗಿ ನಿಯೋಜಿಸಲಾಗಿದೆ ಎಂದು ಅವರು ಹೆಸ್ಕಾಂ ಇಇ ರೋಶನಿ ಪೆಡ್ನೇಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಹೆಸ್ಕಾಂ ಎಂಡಿ ವೈಶಾಲಿ ಎಂ.ಎಲ್.ಅವರಿಗೆ ಕರೆ ಮಾಡಿ `ಸರ್ಕಾರಿ ಅಧಿಕಾರಿಗಳು ಎಂದ ಮೇಲೆ ವರ್ಗಾವಣೆ (transfer) ಸಾಮಾನ್ಯ. ಆದರೆ, ಕಾರವಾರ ಎಇಇ ವರ್ಗಾವಣೆಗೆ ನಿಮಗೆ ಹಳಿಯಾಳದಿಂದ ಒತ್ತಡ ಬಂತು ಎಂಬುದು ಗೊತ್ತಾಯಿತು. ನಾನು ಹಳಿಯಾಳ ಕ್ಷೇತ್ರದ ವರ್ಗಾವಣೆ ವಿಷಯಕ್ಕೆ ತಲೆ ಹಾಕುತ್ತೇನಾ...? ಎಂದು ಪ್ರಶ್ನಿಸಿದರು.
ಬೇರೆ ಅಧಿಕಾರಿಗಳನ್ನು ವರ್ಗಾಯಿಸದೇ (transfer) ಇಲ್ಲಿದ್ದವರನ್ನುಸ್ಥಾನದಿಂದ ಬಿಡುಗಡೆ ಮಾಡಿದ್ದು, ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿದರು. ನೀವು ಅಧಿಕಾರಿಗಳು ರಾಜಕೀಯ ಮಾಡುವುದು ಸರಿಯಲ್ಲ. 10 ದಿನದಲ್ಲಿ ಇಲ್ಲಿಗೆ ಒಬ್ಬ ಎಇಇ ಅವರನ್ನು ನೇಮಕ ಮಾಡಿಸಿ, ಬೇಕಾದರೆ ಹಳಿಯಾಳ ಕ್ಷೇತ್ರದ ಅಧಿಕಾರಿಯನ್ನೇ ತಂದು ನಿಯೋಜನೆ ಮಾಡಿ' ಎಂದರು.
300 ಕೋಟಿ ಅನುದಾನ ತಂದಿದ್ದೇನೆ:
ಒಂದುವರೆ ವರ್ಷದಲ್ಲಿ ಸುಮಾರು 300 ಕೋಟಿ ರೂ. ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ. ನಾವು ಅಲ್ಲಿ ಮುಖ್ಯಮಂತ್ರಿಗಳು, ಸಚಿವರ ಬಳಿ ಹೇಳಿ ಅನುದಾನ ತರುತ್ತೇನೆ. ಆದರೆ, ನಾನು ಗುದ್ದಲಿಪೂಜೆ, ಶಂಕುಸ್ಥಾಪನೆ ಬಗ್ಗೆ ಮಾತನಾಡುವುದಿಲ್ಲ. ಅಧಿಕಾರಿಗಳೂ ಅನುದಾನ ಬಂದ ಬಗ್ಗೆ ಚಕಾರ ಎತ್ತುವುದಿಲ್ಲ. ಇದರಿಂದ ಮಾಧ್ಯಮಗಳಲ್ಲಿ ನಮ್ಮ ಸರ್ಕಾರದ ಬಗ್ಗೆ ತಪ್ಪು ಗ್ರಹಿಕೆ ಮೂಡುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಾಜೇಂದ್ರ ರಾಣೆ, ತಾಪಂ ಆಡಳಿತ ಅಽಕಾರಿ ಸೋಮಶೇಖರ ಮೇಸ್ತ, ತಹಸೀಲ್ದಾರ್ ನಿಶ್ಚಲ ನರೋನಾ, ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ತಾಪಂ ಇಒ ಏಗನಗೌಡರ್ ವೇದಿಕೆಯಲ್ಲಿದ್ದರು.