ಹುಣಸವಳ್ಳಿ ಪಿಡಿಒ ವರ್ಗಾವಣೆ

Published on

ಆಲೂರು: ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಮತ್ತು ಶಾಸಕರ ಶಿಫಾರಸು ಪರಿಗಣಿಸಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಹುಣಸವಳ್ಳಿ ಪಿಡಿಒ ಕೆ.ಎಸ್.ಅಶೋಕ್ ಅವರನ್ನು ಬೇಲೂರು ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಿ ಜಿಪಂ ಸಿಇಒ

ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ. ಅಶೋಕ್ ಅವರು ಗ್ರಾಮ ಪಂಚಾಯಿತಿ ಗಮನಕ್ಕೆ ಬಾರದಂತೆ ಹೊಸ ಬಡಾವಣೆಗಳಿಗೆ ಇ-ಸ್ವತ್ತು ವಿತರಿಸುವುದು, ಮಹಾತ ಗಾಂಧಿ ರಾಷ್ಟ್ರಿಯ ಉದ್ಯೊಗ ಖಾತರಿ ಯೋಜನೆ, 15ನೇ ಹಣಕಾಸು ಯೋಜನೆ ಕಾಮಗಾರಿ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿದ್ದರು. ಅವರ ನಡವಳಿಕೆ ಗ್ರಾಮ ಪಂಚಾಯಿತಿಗೆ ಕಪ್ಪು ಚುಕ್ಕೆಯಾಗಿದ್ದು ಬೇರೆ ಕಡೆಗೆ ವರ್ಗಾವಣೆ ಮಾಡಬೇಕೆಂದು ಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಪ್ರತಿನಿಧಿಗಳು ಲಿಖಿತ ಮನವಿ ಸಲ್ಲಿಸಿದ್ದರು.

ಶಾಸಕ ಸಿಮೆಂಟ್ ಮಂಜು ಅವರೂ ಕೆ.ಎಸ್.ಅಶೋಕ್ ವರ್ಗಾವಣೆಗೆ ಒತ್ತಾಯಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾ ಪಂಚಾಯಿತಿ ಸಿಇಒ ಅವರು ವರ್ಗಾವಣೆ ಮಾಡಿದ್ದಾರೆ. ನಾರಾಯಣಪುರ ಪಿಡಿಒ ಆಗಿದ್ದ ಸಹನಾ ಅವರನ್ನು ತಾತ್ಕಾಲಿಕವಾಗಿ ಹಾಸನ ಜಿಪಂ ಕಚೇರಿಗೆ ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net