ಹಣದ ಖಾತ್ರಿಗೆ ಬ್ಯಾಂಕ್ ಹೌಸ್‌ಫುಲ್

dj brm gruha lakshmi
Published on

ಭರಮಸಾಗರ: ಪಟ್ಟಣದಲ್ಲಿನ ಬ್ಯಾಂಕ್‌ಗಳು ಸಾರ್ವಜನಿಕರು ತುಂಬಿ ತುಳುಕುತ್ತಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ.

ಹೌದು, ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿ ಖಾತೆಗೆ ಹಣ ಸಂದಾಯವಾಗಿದೆಯೋ, ಇಲ್ಲವೋ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಲು ಜನರು ಬ್ಯಾಂಕ್‌ಗಳಿಗೆ ದೌಡಾಯಿಸುತ್ತಿದ್ದಾರೆ.

ಆ.15ರ ಬಳಿಕ ನೋಂದಣಿ ಮಾಡಿಸಿರುವ ಫಲಾನುಭವಿಗಳಿಗೆ ಮುಂದಿನ ತಿಂಗಳಿಂದ ಹಣ ನೀಡುವುದಾಗಿ ಸರ್ಕಾರ ಹೇಳಿದೆ.

ಆದರೂ, ಮಹಿಳೆಯರು, ವೃದ್ಧರು ಹಣ ಖಾತೆಗೆ ಬಂದಿದೆಯೇ ಎನ್ನುವುದನ್ನು ಪರಿಶೀಲಿಸಲು ಬ್ಯಾಂಕ್‌ಗಳ ಎದುರು ಆಧಾರ್ ಕಾರ್ಡ್, ಪಾಸ್‌ಬುಕ್‌ಗಳನ್ನು ಹಿಡಿದು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಸರಿಯಾದ ಮಾಹಿತಿ ನೀಡಿ, ನೋಂದಣಿ ಮಾಡಿಸಿದ್ದರೂ, ಕೆಲವರ ಖಾತೆಗೆ ಹಣ ಬಂದಿಲ್ಲ. ಕೆಲವೊಂದು ತಾಂತ್ರಿಕ ತೊಂದರೆಯಿಂದ ಫಲಾನುಭವಿಗಳ ಖಾತೆಗಳು ರದ್ದಾಗಿವೆ.

ಹೀಗೆ ನೂರಾರು ಸಮಸ್ಯೆಗಳು ಉದ್ಭವಿಸಿವೆ. ಖಾತೆ ಮರು ನೋಂದಣಿಗೆ ಸಾರ್ವಜನಿಕರು ಮುಂದಾಗಿದ್ದಾರೆ.

ಒಟ್ಟಾರೆ ಕಳೆದ ಕೆಲ ದಿನಗಳಿಂದ ಪಟ್ಟಣದ ಬ್ಯಾಂಕ್‌ಗಳಲ್ಲಿ ಹೌಸ್‌ಫುಲ್ ಆಗಿವೆ. ಇದರಿಂದ ಪ್ರತಿದಿನದ ಬ್ಯಾಂಕ್ ವಹಿವಾಟು ನಡೆಸುವ ಗ್ರಾಹಕರು ಪರಿತಪಿಸುವಂತಾಗಿದೆ.

ಪಡಿತರದ ದುಡ್ಡು ಹಾಗೂ ಗೃಹಲಕ್ಷ್ಮಿ ಹಣ ಖಾತೆಗೆ ಜಮಾವಣೆ ಆಗಿದೆ ಎಂದು ನೋಂದಣಿ ಮೊಬೈಲ್ ಸಂಖ್ಯೆಗೆ ಸಂದೇಶ ಬಂದಿದೆ. ಆದರೆ ಬ್ಯಾಂಕ್‌ನ ಸಿಬ್ಬಂದಿಗೆ ಕೇಳಿದರೆ ಬಂದಿಲ್ಲ ಎನ್ನುತ್ತಿದ್ದಾರೆ. ಇದನ್ನು ಪರಿಶೀಲಿಸಲು ಬೆಳಗ್ಗೆಯಿಂದ ಸಾಲಿನಲ್ಲಿ ನಿಂತು ಆಯಾಸವಾಗಿದೆ.ಸಾಕಮ್ಮ, ಫಲಾನುಭವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net