

ಉಡುಪಿ: ಸಮಾಜದಲ್ಲಿ ಪ್ರತ್ಯೇಕತೆಯ ಮನೋಭಾವದಿಂದಾಗಿ ಲಿಂಗತ್ವ ಅಲ್ಪಸಂಖ್ಯಾತರು ಭಿಾಟನೆ ಮೂಲಕ ಜೀವನ ಕಳೆಯುತ್ತಿದ್ದಾರೆ. ಈ ಮಧ್ಯೆ ಮಣಿಪಾಲ ನಿವಾಸಿ ತೃತೀಯಲಿಂಗಿಯೊಬ್ಬರು ಎಂಕಾಂ ಮತ್ತು ಬಿಎಡ್ ಪದವಿ ಪಡೆದು ಕಾರ್ಕಳ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಾ ಮಾದರಿಯಾಗಿದ್ದಾರೆ.
ಕೃಸ್ಟಿಕಾ (30) ಜಿಲ್ಲೆಯ ಏಕೈಕ ತೃತೀಯಲಿಂಗಿ ಶಿಕ್ಷಕಿ. ಹುಡುಗನಾಗಿ ಹುಟ್ಟಿ ಬೆಳೆಯುತ್ತಾ ಹೆಣ್ತನದ ಬಯಕೆಯಿಂದ ಎಲ್ಲರಂತೆಯೇ ಶಸ್ತ್ರ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಆದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ನಿರೀೆಯಿಂದ ಇಷ್ಟಪಟ್ಟು ಓದಿ ಕಷ್ಟಪಟ್ಟು ನೌಕರಿಯನ್ನು ಗಳಿಸಿಕೊಂಡಿದ್ದಾರೆ. ಸದ್ಯ ಕಾರ್ಕಳ ತಾಲೂಕಿನ ಬೈಲೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರ್ಪಡೆಯಾಗಿದ್ದಾರೆ. ಸಮಾಜದಲ್ಲಿ ಹೆಚ್ಚಿನ ಗೌರವಕ್ಕೆ ಪಾತ್ರವಾಗಿರುವ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡಿರುವುದು ಲೈಂಗಿಕ ಅಲ್ಪಸಂಖ್ಯಾತರಿಗೆ ಸ್ಪೂರ್ತಿಯ ವಿಚಾರ. ಯುಪಿಎಂಸಿ ಕಾಲೇಜಿನಲ್ಲಿ ಪದವಿ ಮತ್ತು ಮಣಿಪಾಲ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೃಸ್ಟಿಕಾ 2ನೇ ತರಗತಿಯಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಇಂಗ್ಲಿಷ್ ಪಾಠ ಮಾಡುತ್ತಿದ್ದಾರೆ. ಸದ್ಯ ತಾಯಿಯೊಂದಿಗೆ ಮಣಿಪಾಲದಲ್ಲಿ ವಾಸವಾಗಿದ್ದಾರೆ.
ವಿದ್ಯಾಭ್ಯಾಸ ಮಾಡಿರುವ ಲೈಂಗಿಕ ಅಲ್ಪಸಂಖ್ಯಾತರು ಬಹಳಷ್ಟು ಜನ ಇದ್ದಾರೆ. ಆದರೆ ಉದ್ಯೋಗ ಪಡೆದುಕೊಳ್ಳುವುದು ಕ್ಲಿಷ್ಟಕರವಾಗಿದೆ. ಕೆಲಸ ಕೇಳಿಕೊಂಡು ಹೋದರೂ ಹೆಚ್ಚಿನ ಕಡೆ ಕೆಲಸ ಕೊಡುವುದಿಲ್ಲ. ನನಗೂ ಅದರ ಅನುಭವ ಆಗಿದೆ. ಸರ್ಕಾರ ವಿದ್ಯಾವಂತ ಲೈಂಗಿಕ ಅಲ್ಪಸಂಖ್ಯಾತರಿಗೆ ನೌಕರಿ ಪಡೆಯಲು ಮತ್ತು ಎಲ್ಲರಂತೆ ಬದುಕಲು ಪ್ರೋತ್ಸಾಹ ನೀಡಬೇಕು. ಕೃಸ್ಟಿಕಾ , ಶಿಕ್ಷಕಿ